ಶಿವಮೊಗ್ಗ : ಮಲೆನಾಡಿನಲ್ಲಿ ಅವಧಿಗೂ ಮೊದಲೇ ಮಂಗನ ಕಾಯಿಲೆ ಉಲ್ಬಣವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಭಾಗದಲ್ಲಿ ಒಟ್ಟು ಐದು ಕೆಎಫ್‌ಡಿ ಪ್ರಕರಣಗಳು ಬೆಳಕಿಗೆ ಬಂದಿದೆ.
ಹೊಸನಗರದ ಸೋನಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಂಡು ಬಂದ ಮಂಗನ ಕಾಯಿಲೆ ಪ್ರಕರಣಗಳಲಿ ಮೊದಲು ಹೊಸನಗರ ತಾಲೂಕಿನ ಬಿಳ್ಳೋಡಿ ಗ್ರಾಮದ 55 ವರ್ಷದ ಮಹಿಳೆಯಲ್ಲಿ ಪತ್ತೆಯಾಗಿತ್ತು, ಇದರಿಂದ ಈಗ 3ಕ್ಕೆ ಏರಿಕೆಯಾಗಿತ್ತು. ಸದ್ಯ 5 ಪ್ರಕರಣಗಳು ಪತ್ತೆಯಾಗಿವೆ.
ಬೆಳ್ಳುಳ್ಳಿ ಗ್ರಾಮದಲ್ಲೇ ಐದು ಜನರಲ್ಲಿ ಕೆ ಎಫ್ ಡಿ ಪಾಸಿಟಿವ್ ಬಂದಿದೆ. ಜನವರಿ ಆರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆಯೂ ಇದೀಗ ನವೆಂಬರ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ಸದ್ಯ ಆರೋಗ್ಯ ಇಲಾಖೆ ಸಿಬ್ಬಂದಿ 400 ಪರೀಕ್ಷೆ ನಡೆಸಿದೆ.
ಇದನ್ನೂ ಓದಿ : ರಸ್ತೆ ಗುಂಡಿ ಮುಚ್ಚಲು ಖಾಸಗಿ ಮೊರೆ ಹೋದ ಜಿಬಿಎ | ಪಾಟ್ ಹೋಲ್ ಮುಚ್ಚಲಾಗದೆ ಕೈ ಚೆಲ್ಲಿತಾ ಗ್ರೇಟರ್ ಪ್ರಾಧಿಕಾರ?



















