ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೇಕರಿ, ಕಾಂಡಿಮೆಂಟ್ಸ್ ಗಳ ಮೇಲೆ ಪುಡಿ ರೌಡಿಗಳು ದರ್ಪ ಮೆರೆಯುವುದು ತೀರಾ ಸಾಮಾನ್ಯವಾಗಿದೆ. ಬೇಕರಿ, ಕಾಂಡಿಮೆಂಟ್ಸ್ ಗಳನ್ನೇ ತಮ್ಮ ಅಡ್ಡೆಗಳನ್ನಾಗಿ ಮಾಡಿಕೊಂಡಿರುವ ರೌಡಿಗಳ ಕ್ರೌರ್ಯ ಮತ್ತೆ ಬೇಕರಿಗಳ ಮೇಲೆ ಮುಂದುವರಿದಿದೆ.
ಸಾಲ ವಾಪಾಸು ಕೇಳಿದ ಕಾರಣಕ್ಕೆ ಬನ್ನೇರುಘಟ್ಟದಲ್ಲಿರುವ ಕೆರಾಡಿ ನಾರಾಯಣ ಶೆಟ್ಟಿ ಎನ್ನುವವರಿಗೆ ಸೇರಿದ ಬೇಕರಿಯ ಶೋಕೇಸ್ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.
ಬೇಕರಿಯ ಮಾಲೀಕರು ಸದ್ಯ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.



















