ಬೆಂಗಳೂರು : ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.
ವಹೀದಾ ಭಾನು(50) ಎಂಬುವವರ ಮೇಲೆ ಚಿರತೆ ದಾಳಿ ಮಾಡಿದೆ. ಚೆನೈ ಮೂಲದ ಇವರು ಪತಿ, ಪತ್ನಿ ಮಗನ ಜೊತೆ ಸಫಾರಿಗೆ ಬಂದಿದ್ದರು. KSTDC ವಾಹನದಲ್ಲಿ ಸಫಾರಿಗೆ ತೆರಳಿದ್ದು, ವಾಹನದ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದರು. ಈ ವೇಳೆ ವಾಹನದ ಮೇಲೆ ಎಗರಿ ವಹೀದಾ ಕೈಗೆ ಚಿರತೆ ದಾಳಿ ಮಾಡಿದೆ.
ಗಾಯಾಳು ಮಹಿಳೆಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ : ದಿಲ್ಲಿ ಸ್ಫೋಟದಿಂದ ದೇಶವೇ ತಲ್ಲಣಗೊಂಡಿದೆ, ಆದ್ರೆ ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡ್ತಿದೆ | ಜೋಶಿ ಕಿಡಿ


















