ಬೆಂಗಳೂರು: ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ಹಾಗಾಗಿ, ಗ್ರಾಹಕರು ರಜೆಯ ಪಟ್ಟಿ (Bank Holidays) ನೋಡಿಕೊಂಡು ಬ್ಯಾಂಕುಗಳಿಗೆ ಹೋಗುವುದು ಒಳ್ಳೆಯದು. ಮೇ 1ರಂದು ಕಾರ್ಮಿಕರ ರಜೆ ಸೇರಿ ಮೇ ತಿಂಗಳಲ್ಲಿ ಬ್ಯಾಂಕುಗಳು 12 ದಿನ ಮುಚ್ಚಿರುತ್ತವೆ. ಕೆಲವು ರಜೆಗಳು ರಾಜ್ಯಗಳಿಗೆ ಮಾತ್ರ ಅನ್ವಯವಾದರೆ, ಇನ್ನೂ ಕೆಲವು ಬ್ಯಾಂಕುಗಳಿಗೆ ದೇಶಾದ್ಯಂತ ರಜೆ ಇರಲಿದೆ. ಮೇ ತಿಂಗಳಲ್ಲಿ ಯಾವ ದಿನ ಬ್ಯಾಂಕುಗಳಿಗೆ ರಜೆ ಇದೆ ಎಂಬುದರ ಮಾಹಿತಿ ಇಲ್ಲಿದೆ.
ಮೇ 1, ಗುರುವಾರ: ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ
ಮೇ 4, ಭಾನುವಾರ: ದೇಶಾದ್ಯಂತ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಇರಲಿದೆ.
ಮೇ 9, ಶುಕ್ರವಾರ: ರವೀಂದ್ರನಾಥ ಟ್ಯಾಗೋರ್ ಜಯಂತಿ ಹಿನ್ನೆಲೆಯಲ್ಲಿ ಕೋಲ್ಕತ್ತದಲ್ಲಿ ಬ್ಯಾಂಕುಗಳಿಗೆ ರಜೆ
ಮೇ 10, ಶನಿವಾರ: ತಿಂಗಳ ಎರಡನೇ ಶನಿವಾರ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕ್ಗಳಿಗೆ ಸಾರ್ವತ್ರಿಕ ರಜೆ.
ಮೇ 11, ಭಾನುವಾರ: ವಾರಾಂತ್ಯದ ಹಿನ್ನೆಲೆಯಲ್ಲಿ ದೇಶಾದ್ಯಂತ ರಜೆ
ಮೇ 12, ಸೋಮವಾರ: ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳು ರಜೆ.
ಮೇ 16, ಶುಕ್ರವಾರ: ಸಿಕ್ಕಿಂ ರಾಜ್ಯ ದಿನಾಚರಣೆ ಅಂಗಾವಾಗಿ ಸಿಕ್ಕಿಂನಲ್ಲಿ ಮಾತ್ರ ಬ್ಯಾಂಕುಗಳಿಗೆ ರಜೆ.
ಮೇ 18, ಭಾನುವಾರ: ವಾರಾಂತ್ಯವಾಗಿರುವುದರಿಂದ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ.
ಮೇ 24, ಶನಿವಾರ: ತಿಂಗಳ ನಾಲ್ಕನೇ ಶನಿವಾರ ಆಗಿರುವ ಕಾರಣ ದೇಶಾದ್ಯಂತ ರಜೆ.
ಮೇ 25, ಭಾನುವಾರ: ವಾರಾಂತ್ಯದ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ.
ಮೇ 26, ಸೋಮವಾರ: ಕಾಜಿ ನಜ್ರುಲ್ ಇಸ್ಲಾಂ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅಗರ್ತಲಾದಲ್ಲಿ ಮಾತ್ರ ರಜೆ.
ಮೇ 29, ಗುರುವಾರ: ಮಹಾರಾಣಾ ಪ್ರತಾಪ್ ಜಯಂತಿ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಮಾತ್ರ ರಜೆ.



















