ಕೊಪ್ಪಳ: ಕನ್ನಡ ಬರಲ್ಲ. ಹಿಂದಿ, ತೆಲಗು ಮಾತ್ರ ಬರುತ್ತದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಪ್ಪಳದ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಸಿಬ್ಬಂದಿಯೋರ್ವ ಕನ್ನಡ ಬರಲ್ಲ ಎಂದು ಹೇಳಿದ್ದಾನೆ. ತಾನು ಮಾತನಾಡುವ ಹಿಂದಿ ಭಾಷೆಯನ್ನು ಟ್ರಾನ್ಸ್ಲೇಟ್ ಮಾಡುವುದಕ್ಕೆ ಮತ್ತೊಬ್ಬ ಸಿಬ್ಬಂದಿಯನ್ನು ಕರೆದಿದ್ದಾನೆ. ಇದರಿಂದ ಅಕ್ರೋಶಗೊಂಡ ಸಾರ್ವಜನಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿದ್ದು ಕನ್ನಡ ಬರುವುದಿಲ್ಲ ಎಂದರೆ ಹೇಗೆ ? ಹಿಂದಿ, ತೆಲಗು ಬಾರದೆ ಇದ್ದವರು ಏನು ಮಾಡಬೇಕು ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.