ಯಾದಗಿರಿ: ವಾರದಲ್ಲಿ ಐದು ದಿನ ಕೆಲಸದ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬ್ಯಾಂಕ್ ನೌಕರರು ದೇಶದ್ಯಾಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿ ಮುಷ್ಕರ ಹಿನ್ನೆಲೆ ರಾಜ್ಯದ ಹಲವು ಭಾಗಗಳ ಜನರಿಗೆ ಮುಷ್ಟರದ ಬಿಸಿ ಮುಟ್ಟಿದೆ.
ಯಾದಗಿರಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ತಟ್ಟಿದ ಮುಷ್ಕರದ ಬಿಸಿ

ಯಾದಗಿರಿ ಜಿಲ್ಲೆಯ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿ ನಗರದ ಎಸ್ಬಿಐ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಮುಷ್ಕರದ ಬಿಸಿ ಸಾರ್ವಜನಿಕರಿಗೆ ತಟ್ಟಿದ್ದು, ದಿನ ನಿತ್ಯದ ಕೆಲಸಕ್ಕೆಂದು ಬ್ಯಾಂಕ್ ಕಡೆ ಬರುವ ಜನ ಹೈರಾಣಾಗಿದ್ದಾರೆ. ಕೆಲವರು ಮುಷ್ಕರದ ಸುದ್ದಿ ಗೊತ್ತಿಲ್ಲದೆ ಬ್ಯಾಂಕ್ ಕಡೆ ಬಂದು ವಾಪಸಾಗುತ್ತಿರುವ ದೃಶ್ಯ ಕೂಡ ಕಂಡು ಬಂದಿದೆ.
ಚಾಮರಾಜನಗರದಲ್ಲಿ ಮುಷ್ಕರದಿಂದ ನಿರಾಶಗೊಂಡ ಗ್ರಾಹಕರು

ಇನ್ನೂ, ಗಡಿ ಚಾಮರಾಜನಗರದಲ್ಲು ಬ್ಯಾಂಕ್ ನೌಕರರ ಮುಷ್ಕರದ ಬಿಸಿ ತಟ್ಟಿದ್ದು, ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಬ್ಯಾಂಕಿಂಗ್ ಸೇವೆ ಸ್ಥಗಿತವಾಗಿದೆ. ಗ್ರಾಹಕರು ಮುಷ್ಕರದ ಮಾಹಿತಿ ತಿಳಿಯದೆ ಬಂದು ನಿರಾಶರಾಗಿ ವಾಪಸ್ ತೆರಳಿದ್ದಾರೆ.
ಧಾರವಾಡದಲ್ಲಿ ಸರ್ಕಾರದ ವಿರುದ್ಧ ನೌಕರರ ಆಕ್ರೋಶ

ಧಾರವಾಡದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯಿಂದ ನಗೆದ ಜ್ಯುಬಿಲಿ ವೃತ್ತದಿಂದ ಡಿಸಿ ಕಚೇರಿ ವರೆಗೂ ರ್ಯಾಲಿ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ವೇಳೆ ಪ್ರತಿಭಟನೆಯಲ್ಲಿ ನೂರಾರು ಬ್ಯಾಂಕ್ ನೌಕರರು ಭಾಗಿಯಾಗಿದ್ದರು
ಇದನ್ನೂ ಓದಿ: ಸಾಲು ಸಾಲು ರಜೆ ಮುಗಿಸಿ ಮರಳಿದ ಜನ | ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್.. ಹೈರಾಣಾದ ವಾಹನ ಸವಾರರು



















