ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದಲ್ಲಿ (BOB Recruitment 2025) ದೇಶಾದ್ಯಂತ ವಿಶೇಷ ಆಫೀಸರ್ ಗಳ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 11ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಸೇರಿ ಹ ಲವು ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮಾರ್ಚ್ 13ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 19ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಅರ್ಜಿ ಸಲ್ಲಿಕೆ, ಶುಲ್ಕದ ವಿವರ
ಬ್ಯಾಂಕ್ ಆಫ್ ಬರೋಡಾದ https://www.bankofbaroda.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜನರಲ್, ಒಬಿಸಿ ಹಾಗೂ ಇಡಬ್ಲ್ಯೂಎಸ್ ನವರಿಗೆ 600 ರೂಪಾಯಿ ಅರ್ಜಿ ಶುಲ್ಕವಿದ್ದರೆ, ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಹಾಗೂ ಹೆಣ್ಣುಮಕ್ಕಳಿಗೆ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ. ಸುಮಾರು 48 ಸಾವಿರ ರೂ.ನಿಂದ 1.35 ಲಕ್ಷ ರೂ.ವರೆಗೆ ಹುದ್ದೆಗಳಿಗೆ ಅನುಗುಣವಾಗಿ ಸಂಬಳ ನಿಗದಿಪಡಿಸಲಾಗುತ್ತದೆ.

ಹುದ್ದೆಗಳು ಮತ್ತು ವಿದ್ಯಾರ್ಹತೆ
ಸೀನಿಯರ್ ಮ್ಯಾನೇಜರ್ – 94 ಹುದ್ದೆ, ವಿದ್ಯಾರ್ಹತೆ: ಸಿಎ, ಸಿಎಫ್ಎ, ಬಿಇ/ಬಿ.ಟೆಕ್, ಪದವಿ, ಎಂಇ/ ಎಂ.ಟೆಕ್, ಎಂಸಿಎ, ಎಂಬಿಎ, ಪಿಜಿಡಿಎಂ, ಸ್ನಾತಕೋತ್ತರ ಪದವಿ
ಮ್ಯಾನೇಜರ್ – 319 ಹುದ್ದೆ, ವಿದ್ಯಾರ್ಹತೆ: ಸಿಎ, ಸಿಎಫ್ಎ, ಬಿಇ/ಬಿ.ಟೆಕ್, ಪದವಿ, ಎಂಇ/ ಎಂ.ಟೆಕ್, ಎಂಸಿಎ, ಎಂಬಿಎ, ಪಿಜಿಡಿಎಂ, ಸ್ನಾತಕೋತ್ತರ ಪದವಿ
ಆಫೀಸರ್ – 100 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಎಂಸಿಎ
ಚೀಫ್ ಮ್ಯಾನೇಜರ್ – 5, ವಿದ್ಯಾರ್ಹತೆ: ಸಿಎ, ಸಿಎಫ್ಎ, ಬಿಇ/ಬಿ.ಟೆಕ್, ಪದವಿ, ಎಂಇ/ಎಂ.ಟೆಕ್, ಎಂಸಿಎ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಎಂ
ಪರೀಕ್ಷೆ ನಡೆಸುವ ವಿಧಾನ
- ಆನ್ ಲೈನ್ ಟೆಸ್ಟ್
- ಸೈಕೋಮೆಟ್ರಿಕ್ ಟೆಸ್ಟ್
- ಸಮೂಹ ಚರ್ಚೆ
- ಸಂದರ್ಶನ