ಬೆಂಗಳೂರು: ಹನುಮಂತನಗರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 18 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಈ ಕುರಿತು ಸಿಸಿಬಿ ಪೊಲೀಸರು ಒಂದನೇ ಎಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ತನಿಖೆ ವೇಳೆ ಆರೋಪಿಗಳು ಬ್ಯಾಂಕಿಗೆ 3 ಕೋಟಿ 73 ಲಕ್ಷ ರೂ. ವಂಚನೆ ಮಾಡಿರುವುದಾಗಿ ಬಯಲಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋ.ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಲಗಂಗಾಧರ(A1), ಹಣ ಪಡೆದು ವಂಚಿಸಿರು ಎನ್. ಹನುಮಂತರಾಯ(A2), ಪುಟ್ಟಮ್ಮ(A3), ಚಂದ್ರಶೇಖರ್(A4), ಇಲಿಯಾಸ್ ಪಾಷಾ(A5), ಸುನಿಲ್ ಕುಮಾರ್ ಜಿ(A6), ಶಿವಕುಮಾರ್ ಬಿ ಎ(A7), ಸುರೇಶ್ ಕುಮಾರ್ ಬಿ(A8), ಸೈಯದ್ ಇತ್ನೈನ್ ಅಹ್ಮದ್(A9), ರೂಪಾ(A10), ಪವನ್ ಸಿಂಗ್(A11), ಎಂ ಮಂಜುನಾಥ್(A12), ಬ್ಯಾಂಕಿನ ಸಿಬ್ಬಂದಿಗಳಾದ (A13) ಆರ್ ಎಂ ನಾಗಭೂಷಣ ಗೌಡ-ಜೂನಿಯರ್ ಅಸಿಸ್ಟೆಂಟ್, (A14)ಅಕೌಂಟೆಂಟ್ ಭೋರೇಗೌಡ,(A15)ಬಿಪಿ ಪ್ರಕಾಶ್ ಮ್ಯಾನೇಜರ್, (A16)ಚಂದ್ರೇಗೌಡ ಕ್ಲರ್ಕ್, ಏಜೆಂಟ್ ಗಳಾದ ಕೃಷ್ಣ(A17) ಮತ್ತು ಬಿಜಿ ಬಾಲಾಜಿ(A18) ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಅಕ್ರಮವಾಗಿ ಹಣ ಗಳಿಸುವುದಕ್ಕಾಗಿ ಸೊಸೈಟಿ ಅಧ್ಯಕ್ಷ ಸಿ.ವಿ. ಬಾಲಗಂಗಾಧರ A13, 14, 15, 16 ಜೊತೆ ಸೇರಿ ಕೃತ್ಯ ಎಸಗಿದ್ದಾನೆಂಬ ಆರೋಪ ಕೇಳಿ ಬಂದಿದೆ. ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಲೋನ್ ಸಿಗದವರಿಗೆ ತಮ್ಮ ಬ್ಯಾಂಕ್ ನಲ್ಲಿ ಲೋನ್ ಸಿಗುತ್ತದೆಂಬ ನಂಬಿಸಿ ಈ ಕೃತ್ಯ ಎಸಗಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಏಜೆಂಟ್ ಗಳ ಮೂಲಕ ಇಂತಹ ವ್ಯಕ್ತಿಗಳನ್ನು ಸಂಪರ್ಕಿಸಿ, ಲೋನ್ ಪಡೆದವರಿಂದ ಕಮೀಷನ್ ಪಡೆದು ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹನುಂಮತರಾಯ 25 ಲಕ್ಷ ರೂ, ಪುಟ್ಟಮ್ಮ ಮತ್ತು ಚಂದ್ರಶೇಖರ್ ಸೇರಿ 30 ಲಕ್ಷ ರೂ, ಇಲಿಯಾಸ್ 45 ಲಕ್ಷ ರೂ, ಸುನಿಲ್ ಕುಮಾರ್ ಜಿ 25 ಲಕ್ಷ ರೂ, ಶಿವಕುಮಾರ್ 50 ಲಕ್ಷ ರೂ, ಸುರೇಶ್ ಕುಮಾರ್ ಬಿ 18.5 ಲಕ್ಷ ರೂ, ಸೈಯದ್ ಇನ್ನೈತ್ 50 ಲಕ್ಷ ರೂ, ರೂಪಾ 45 ರೂ. ರೂ, ಪವನ್ ಸಿಂಗ್ 50 ಲಕ್ಷ ರೂ, ಎಂ ಮಂಜುನಾಥ್ 25 ಲಕ್ಷ ರೂ, ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದು ವಂಚಿಸಿರುವುದು ತನಿಖೆ ವೇಳೆ ದೃಢಪಟ್ಟಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.