ಬೆಂಗಳೂರು: ಬ್ಯಾಂಕ್ ಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಬ್ಯಾಂಕ್ ಆಫ್ ಬರೋಡಾ ಅವಕಾಶದ ಬಾಗಿಲು ತೆರೆದಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ 146 ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಜರ್ ಹುದ್ದೆಗಳಿಗೆ (BOB Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರು, ಈಗಾಗಲೇ ಅನುಭವ ಇರುವವರು ಕೂಡ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್ 15 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ ಇಲ್ಲಿದೆ
ಡೆಪ್ಯೂಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್- 01
ಪ್ರೈವೇಟ್ ಬ್ಯಾಂಕರ್-ರೇಡಿಯನ್ಸ್ ಪ್ರೈವೇಟ್- 03
ಗ್ರೂಪ್ ಹೆಡ್ – 04
ಟೆರಿಟರಿ ಹೆಡ್- 17
ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಜರ್- 101
ವೆಲ್ತ್ ಸ್ಟ್ರ್ಯಾಟೆಜಿಸ್ಟ್- 18
ಪ್ರಾಡಕ್ಟ್ ಹೆಡ್- 01
ಪೋರ್ಟ್ ಫೋಲಿಯೋ ರಿಸರ್ಚ್ ಅನಾಲಿಸ್ಟ್- 01
ವಾರ್ಷಿಕ ಸಂಬಳದ ಪ್ಯಾಕೇಜ್ 6 ಲಕ್ಷ ರೂ.ನಿಂದ 28 ಲಕ್ಷ ರೂ.ವರೆಗೂ ಇರಲಿದೆ. ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಿದ ಬಳಿಕ ಬ್ಯಾಂಕ್ ಶಾರ್ಟ್ ಲಿಸ್ಟ್ ಮಾಡುತ್ತದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುತ್ತದೆ. ಸಂದರ್ಶನದಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ನೇಮಕಾತಿ ಆದೇಶ ನೀಡಲಾಗುತ್ತದೆ.
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷದ ಸಡಿಲಿಕೆ ಇದೆ. ಇನ್ನು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇದೆ. ಇಡಬ್ಲ್ಯೂಎಸ್ ವರ್ಗದ ದಿವ್ಯಾಂಗರಿಗೆ 10 ವರ್ಷ, ಒಬಿಸಿ ದಿವ್ಯಾಂಗರಿಗೆ 13 ಹಾಗೂ ಎಸ್ಸಿ, ಎಸ್ಟಿ ದಿವ್ಯಾಂಗರಿಗೆ 15 ವರ್ಷಗಳ ವಯಸ್ಸಿನ ಸಡಿಲಿಕೆ ಇದೆ. ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ವರ್ಗದವರಿಗೆ 600 ರೂ. ಅರ್ಜಿ ಶುಲ್ಕ ಇದ್ದರೆ, ಎಸ್ಸಿ, ಎಸ್ಟಿ, ಮಹಿಳೆಯರಿಗೆ 100 ರೂ. ಇದೆ.