ಬೆಂಗಳೂರು: ಯುಪಿಐ, ನೆಟ್ ಬ್ಯಾಂಕಿಂಗ್ ಇದ್ದರೂ ಯಾವುದೋ ಕೆಲಸಕ್ಕಾಗಿ ಬ್ಯಾಂಕುಗಳಿಗೆ ತೆರಳಬೇಕಾಗುತ್ತದೆ. ಆದರೆ, ಸೆಪ್ಟೆಂಬರ್ ನಲ್ಲಿ ಸಾಲು ಸಾಲು ರಜೆಗಳು ಇರುವ ಕಾರಣ ಬ್ಯಾಂಕುಗಳಿಗೆ ಹೋಗುವ ಮುನ್ನ ರಜೆ ಇದೆಯೇ, ಇಲ್ಲವೇ ಎಂಬುದನ್ನು ಗಮನದಲ್ಲಿಟ್ಟುಕೊಂಡು ತೆರಳಬೇಕಾಗುತ್ತದೆ. ಅದರಲ್ಲೂ, ಮುಂದಿನ ತಿಂಗಳು 15 ದಿನ ರಜೆ ಇರುವ ಕಾರಣ ನಿಮ್ಮ ಅನುಕೂಲಕ್ಕಾಗಿ ರಜಾ ದಿನಗಳ ಪಟ್ಟಿಯನ್ನು ನೀಡಿದ್ದೇವೆ. ಇದನ್ನು ಗಮನಿಸಿಕೊಂಡು ಬ್ಯಾಂಕ್ ಗಳಿಗೆ ತೆರಳುವುದು ಒಳಿತು.
ಸೆಪ್ಟೆಂಬರ್ ನಲ್ಲಿ ಬ್ಯಾಂಕ್ ರಜೆಯ ಪಟ್ಟಿ
ಸೆ. 3: ಕರ್ಮಪೂಜೆ (ಜಾರ್ಖಂಡ್ ನಲ್ಲಿ ರಜೆ)
ಸೆ. 4: ಓಣಂ ಹಬ್ಬ (ಕೇರಳದಲ್ಲಿ ರಜೆ)
ಸೆ. 5: ಈದ್ ಮಿಲಾದ್, ತಿರು ಓಣಂ (ಕರ್ನಾಟಕ, ತಮಿಳುನಾಡು ಸೇರಿ ಹೆಚ್ಚಿನ ರಾಜ್ಯಗಳಲ್ಲಿ ರಜೆ)
ಸೆ. 6: ಈದ್ ಮಿಲಾದ್, ಇಂದ್ರಜಾತ್ರ (ಸಿಕ್ಕಿಂ, ಛತ್ತೀಸ್ ಗಡ)
ಸೆ. 7: ಭಾನುವಾರದ ರಜೆ
ಸೆ. 12: ಈದ್ ಮಿಲಾದುಲ್ ನಬಿ (ಜಮ್ಮು-ಕಾಶ್ಮೀರದಲ್ಲಿ ರಜೆ)
ಸೆ. 13: 2ನೇ ಶನಿವಾರದ ರಜೆ
ಸೆ. 14: ಭಾನುವಾರದ ರಜೆ
ಸೆ. 21: ಭಾನುವಾರದ ರಜೆ
ಸೆ. 22: ನವರಾತ್ರಿ ಸ್ಥಾಪನಾ (ರಾಜಸ್ಥಾನದಲ್ಲಿ ರಜೆ)
ಸೆ. 23: ಮಹಾರಾಜ ಹರಿಸಿಂಗ್ಜಿ ಜಯಂತಿ (ಜಮ್ಮು-ಕಾಶ್ಮೀರದಲ್ಲಿ ರಜೆ)
ಸೆ. 27: 4ನೇ ಶನಿವಾರದ ರಜೆ
ಸೆ. 28: ಭಾನುವಾರದ ರಜೆ
ಸೆ. 29: ದುರ್ಗಾ ಪೂಜೆ, ಮಹಾಸಪ್ತಮಿ (ಪಶ್ಚಿಮ ಬಂಗಾಳ, ತ್ರಿಪುರ, ಅಸ್ಸಾಂನಲ್ಲಿ ರಜೆ)
ಸೆ. 30: ಮಹಾ ಅಷ್ಟಮಿ, ದುರ್ಗಾಷ್ಟಮಿ, ದುರ್ಗಾ ಪೂಜೆ (ತ್ರಿಪುರಾ, ಒಡಿಶಾ ಸೇರಿ ಹಲವು ರಾಜ್ಯಗಳಲ್ಲಿ ರಜೆ)
ಈ ದಿನಾಂಕಗಳನ್ನು ಗಮನದಲ್ಲಿ ಇಟ್ಟುಕೊಂಡು ಗ್ರಾಹಕರು ಬ್ಯಾಂಕ್ ಗಳಿಗೆ ತೆರಳಬಹುದಾಗಿದೆ. ಇನ್ನು, ಕೆಲವೇ ರಾಜ್ಯಗಳಲ್ಲಿ ಮಾತ್ರ ವಿಶೇಷ ಸಂದರ್ಭ, ಹಬ್ಬಗಳಂದು ರಜೆ ಇರುತ್ತದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ ನಲ್ಲಿ 5ನೇ ತಾರೀಖು ಈದ್ ಮಿಲಾದ್ ಹೊರತುಪಡಿಸಿ ಬೇರೆ ಯಾವುದೇ ದಿನ (ಶನಿವಾರ, ಭಾನುವಾರ ಹೊರತುಪಡಿಸಿ) ವಿಶೇಷ ರಜೆ ಇರುವುದಿಲ್ಲ.