ಎಲ್ಲೆಲ್ಲೂ ಬ್ಯಾಂಗಲ್ ಬಂಗಾರಿಯದ್ದೇ ಹವಾ ಎನ್ನುವಂತಾಗಿದೆ. ರೀಲ್ಸ್ ಓಪನ್ ಮಾಡಿದರೆ ಸಾಕು ಬ್ಯಾಂಗಲ್ ಬಂಗಾರಿ ಎನ್ನುವಂತಾಗಿದೆ.
ಹೌದು! ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಹಾಡು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಪಡೆದಿದೆ. ಅಲ್ಲದೇ, ಟಾಪ್ ಮ್ಯೂಸಿಕ್ ವೀಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರ ತಂಡ ಸಂಭ್ರಮಿಸುತ್ತಿದೆ. ಯುವರಾಜ್ ಕುಮಾರ್ ಹಾಗೂ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತ ಕುಣಿದು ಕುಪ್ಪಳಿಸಿದ್ದಾರೆ.
ಇದೀಗ ಎಲ್ಲಿ ಹೋದರೂ ಈ ಹಾಡಿನದ್ದೇ ಹವಾ ಎನ್ನುವಂತಾಗಿದೆ. ಈ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಆಂತೋನಿ ದಾಸ್ ಹಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಗಮನ ಸೆಳೆಯುತ್ತಿದೆ.



















