ನವದೆಹಲಿ: ಬಾಂಗ್ಲಾದೇಶ ತಂಡದ ಸ್ಟಾರ್ ಆಟಗಾರ ಹಾಗೂ ಮಾಜಿ ನಾಯಕ ತಮೀಮ್ ಇಕ್ಬಾಲ್ (Tamim Iqbal Retirement) ಅವರು ಎರಡನೇ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎರಡನೇ ಬಾರಿ ವಿದಾಯ ಹೇಳಿದ್ದಾರೆ. 2023ರ ಜುಲೈನಲ್ಲಿ ಮೊದಲ ಬಾರಿ ವಿದಾಯ ಹೇಳಿದ್ದ ಅವರು ಬಳಿಕ ತಂಡಕ್ಕೆ ವಾಪಸಾಗಿದ್ದರು! ಈ ವೇಳೆ ವೇಳೆ ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಮನವೋಲಿಸಿದ್ದರು.
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ತಮೀಮ್ ಇಕ್ಬಾಲ್ ಇಲ್ಲಿಯವರೆಗೂ 70 ಟೆಸ್ಟ್ ಪಂದ್ಯಗಳು, 243 ಒಡಿಐ ಪಂದ್ಯಗಳು ಹಾಗೂ 78 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ತಂಡಕ್ಕೆ ಮರಳಬೇಕೆಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಆಯ್ಕೆದಾರ ಗಝಿ ಅಶ್ರಫ್ ತಮೀಮ್ ಇಕ್ಬಾಲ್ ಗೆ ಹೇಳಿದ್ದರು. ನಾಯಕ ನಜ್ಮುಲ್ ಹುಸೇನ್ ಶಾಂಟೊ ಕೂಡ ಮಾತನಾಡಿದ್ದರು. ಆದರೆ, ಎಡಗೈ ಬ್ಯಾಟ್ಸ್‌ಮನ್ ವಿದಾಯ ಹೇಳಿದ್ದಾರೆ.
ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ತಮೀಮ್ ಇಕ್ಬಾಲ್, “ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೀರ್ಘಾವಧಿ ದೂರ ಉಳಿದಿದ್ದೇನೆ. ಈ ಅಂತರ ಹಾಗೆ ಮುಂದುವರಿಯಲಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಅಧ್ಯಾಯ ಮುಕ್ತಾಯವಾಗಿದೆ. ಮುಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬರುತ್ತಿದೆ ಹಾಗೂ ಪ್ರತಿಯೊಬ್ಬರ ಗಮನವನ್ನು ಸೆಳೆಯಲು ನನಗೆ ಇಷ್ಟವಿಲ್ಲ, ಇದು ತಂಡದ ಗಮನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿಂದೆ ಕೂಡ ಇದು ಆಗಬಾರದಿತ್ತೆಂದು ನಾನು ಭಾವಿಸಿದ್ದೆ,” ಎಂದು ಹೇಳಿದ್ದಾರೆ.

ಕೇಂದ್ರ ಗುತ್ತಿಗೆಯಿಂದ ನನ್ನನ್ನು ಕೈ ಬಿಡಲಾಗಿತ್ತು
“ಬಾಂಗ್ಲಾದೇಶ ಕ್ರಿಕೆಟ್‌ನ ಕೇಂದ್ರ ಗುತ್ತಿಗೆಯಿಂದ ನನ್ನನ್ನು ಸಾಕಷ್ಟು ದಿನಗಳ ಹಿಂದೆ ತೆಗೆಯಲಾಗಿತ್ತು ಏಕೆಂದರೆ, ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಇಷ್ಟವಿರಲಿಲ್ಲ. ನಾನು ಅಸಮಾಧಾನದೊಂದಿಗೆ ರಾಷ್ಟ್ರೀಯ ತಂಡದಿಂದ ಹಿಂದೆ ಸರಿದಿದ್ದೇನೆಂದು ಹಲವರು ಹೇಳಿದ್ದರು. ಆದರೆ, ಕೇಂದ್ರ ಗುತ್ತಿಗೆ ಇಲ್ಲದ ಆಟಗಾರನ ಬಳಿಕ ಆಯ್ಕೆದಾರರು ಏಕೆ ಮಾತನಾಡುತ್ತಾರೆ? ಒಂದು ವರ್ಷದ ಹಿಂದೆ ನಾನು ಸ್ವಯಃ ಪ್ರೆರಣೆಯಿಂದ ನಿವೃತ್ತಿ ಪಡೆದಿದ್ದೇನೆ,” ಎಂದು ತಮೀಮ್ ಇಕ್ಬಾಲ್ ತಿಳಿಸಿದ್ದಾರೆ.