ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ತಂಡವು ವಿದೇಶಿ ನೆಲದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಉಭಯ ತಂಡಗಳ ನಡುವೆ ನಡೆದ ಕೊನೆಯ ಹಾಗೂ ಮೂರನೇ ಟಿ20ಪಂದ್ಯದಲ್ಲಿ ಆತಿಥೇಯ ತಂಡವನ್ನು 80 ರನ್ ಗಳಿಂದ ಸೋಲಿಸುವ ಮೂಲಕ ಬಾಂಗ್ಲಾ ತಂಡ ಈ ಐತಿಹಾಸಿಕ ಸಾಧನೆ ಮಾಡಿದೆ.
ಮೂರನೇ ಟಿ20ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 189 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 109 ಸರ್ವಪತನ ಕಂಡಿತು. ಈ ಮೂಲಕ ಬಾಂಗ್ಲಾದೇಶ ತಂಡ ಈ ಸಾಧನೆ ಮಾಡಿದೆ.
ಬಾಂಗ್ಲಾದೇಶ 20 ಓವರ್ ಗಳಲ್ಲಿ 7 ವಿಕೆಟ್‌ಗೆ 189 ರನ್ ಗಳಿಸಿತು. ತಂಡದ ಪರ ಜಾಕಿರ್ ಅಲಿ 41 ಎಸೆತಗಳಲ್ಲಿ 6 ಸಿಕ್ಸರ್ ಒಳಗೊಂಡ ಅಜೇಯ 72 ರನ್ ಗಳಿಸಿದರು. ಉಳಿದಂತೆ ಪರ್ವೇಜ್ ಹೊಸೈನ್ ಎಮಾನ್ 39 ರನ್ ಗಳ ಇನ್ನಿಂಗ್ಸ್ ಕಟ್ಟಿದರು. ಮೆಹದಿ ಹಸನ್ ಮಿರಾಜ್ 29 ರನ್ ಗಳಿಸಿದ್ದರು.
ಗುರಿ ಬೆನ್ನತ್ತಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು. ನಂತರ ಅರ್ಧದಷ್ಟು ವಿಂಡೀಸ್ ತಂಡದ ಆಟಗಾರರು ಕೇವಲ 46 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡಿರು. ಅಂತಿಮವಾಗಿ ತಂಡ 16.4 ಓವರ್ ಗಳಲ್ಲಿ ಆಲೌಟ್ ಆಯಿತು. ಈಊ ಮೂಲಕ ಸತತ ಮೂರನೇ ಬಾರಿಗೆ ವೆಸ್ಟ್ ಇಂಡೀಸ್ ತಂಡ ಗುರಿ ಬೆನ್ನಟ್ಟುವಲ್ಲಿ ವಿಫಲವಾಯಿತು. ಮೊದಲ ಟಿ20ಯಲ್ಲಿ 148 ರನ್ ಚೇಸ್ ಮಾಡಲು ವಿಫಲವಾಗಿದ್ದ ವಿಂಡೀಸ್. ಎರಡನೇ ಪಂದ್ಯದಲ್ಲಿ 130 ರನ್ ಗಳನ್ ಚೇಸ್ ಮಾಡುವಲ್ಲಿ ಯಡವಿತ್ತು. ಈಗ ಮತ್ತೆ ಮುಗ್ಗರಿಸಿದೆ.