ಸಿಲಿಕಾನ್ ಸಿಟಿ ಬೆಂಗಳೂರು ಮೆಟ್ರೋ ಸಿಟಿ ಸ್ಥಾನಮಾನದ ನಿರೀಕ್ಷೆಯಲ್ಲಿತ್ತು. ಕೇಂದ್ರ ಸರಕಾರ ನಿರಾಕರಿಸುವ ಮೂಲಕ ಬೆಂಗಳೂರಿಗರ ಲೆಕ್ಕಾಚಾರ ಹಳಿ ತಪ್ಪಿದೆ. ಮನೆ ಬಾಡಿಗೆ ಭೆತ್ಯೆ, ತೆರಿಗೆ ಸೇರಿ ಹಲವು ಅನುಕೂಲ ತರುವ ಮೆಟ್ರೋ ಸಿಟಿ ಸ್ಥಾನಮಾನ ಬೆಂಗಳೂರಿಗೆ ಕಳೆದ ಬಜೆಟ್ ಸಮಯದಲ್ಲೇ ಘೋಷಣೆ ಸಾಧ್ಯತೆ ನಿರೀಕ್ಷಿಸಲಾಗಿತ್ತು. ಈಗಿರುವ ಮೆಟ್ರೋ ಸಿಟಿಗಳಾದ ದೆಹಲಿ, ಮುಂಬೈ, ಕಲ್ಕತ್ತಾ, ಚೆನೈ ಜೊತೆ ಬೆಂಗಳೂರು ಸಹ ಸೇರಿಕೊಳ್ಳುವ ನಿರೀಕ್ಷೆ ಜಾರಿಯಲ್ಲಿತ್ತು. ಕೇಂದ್ರ ಹಣಕಾಸು ಸಹಾಯಕ ಸಚಿವ ಪಂಕಜ್ ಚೌಧರಿ ಬೆಂಗಳೂರನ್ನು ಮೆಟ್ರೋ ನಗರವಾಗಿ ಪರಿಗಣಿಸಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. 1962 ನಿಯಮ 2ಎ ಅಡಿಯಲ್ಲಿ ಮೆಟ್ರೋ ನಗರಗಳು ಮತ್ತು ಇತರ ನಗರಗಳ ನಡುವೆ ವ್ಯೆತ್ಯಾಸವಿದೆ. ಸದ್ಯ ಅಸ್ಥಿತ್ವದಲ್ಲಿರುವ ನೀತಿಯನ್ನು ಬದಲಿಸುವ ಉದ್ದೇಶವಿಲ್ಲ. ಹಾಗಾಗಿ ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ನೀಡುವ ಆಲೋಚನೆ ಸರ್ಕಾರದ ಮುಂದಿಲ್ಲ ಎಂದರು.