ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದಿದ್ದು, ನಗರದ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಇಬ್ಬರನ್ನು ಕೊಲೆಗೈದಿರುವ ಘಟನೆ ನಡೆದಿದೆ. ಯಮುನಾ (36) ಹಾಗೂ ಆಕೆಯ ಸಹೋದರ ಸುದೀಪ್ (34) ಹತ್ಯೆಯಾದವರು.
ಕೊಲೆ ನೆಡೆದಿದ್ದು ಹೇಗೆ?
ಯಮುನಾ ಗಂಡ ಮಲ್ಲೇಗೌಡ ಛಾಯಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪವಿದೆ. ಇದನ್ನ ಕೇಳಲು ಯಮುನಾ ಮತ್ತು ಆಕೆಯ ಸಹೋದರ ಸುದೀಪ್ ಛಾಯಾ ಮನೆ ಬಳಿ ಹೋಗಿದ್ದರು. ಅಕ್ರಮ ಸಂಬಂಧ ವಿಚಾರ ಪ್ರಸ್ತಾಪಿಸುತ್ತಿದ್ದಾಗ ಛಾಯಾ ಹಾಗೂ ಯಮುನಾ ನಡುವೆ ವಾಗ್ವಾದ ಬೆಳೆದಿತ್ತು.

ಇನ್ನು, ಚಾಕುವನ್ನ ಹಿಡಿದೇ ಯಮುನಾ ಮತ್ತು ಸುದೀಪ್ ಮನೆಗೆ ನುಗ್ಗಿದ್ದರು ಎನ್ನಲಾಗಿದೆ. ಗಲಾಟೆ ವೇಳೆ ತನ್ನ ತಾಯಿಯನ್ನ ಕೊಂದು ಹಾಕ್ತಾರೆ ಎಂಬ ಕಾರಣಕ್ಕೆ ಛಾಯಾಳ ಮಗ ಅವರದೇ ಚಾಕುವಿನಿಂದ ಯಮುನಾ ಹಾಗೂ ಆಕೆಯ ಸಹೋದರ ಸುದೀಪ್ ಇಬ್ಬರನ್ನು ಕೊಂದಿದ್ದಾನೆ. ನಂತರ ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ.
ಪೊಲೀಸರು ಬಂದರೂ ಬಾಗಿಲು ತೆಗೆಯದ ಛಾಯಾಳ ಮಗ, ತಂದೆ ಬಂದು ಬಾಗಿಲು ತೆರೆಯಲು ಹೇಳಿದಾಗ ಬಾಗಿಲು ತೆಗೆದು ಹೊರ ಬಂದಿದ್ದಾನೆ. ಸದ್ಯ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಐಪಿಎಲ್‌ನಲ್ಲಿ ‘ಅಪೂರ್ಣ ಕ್ಯಾಚ್’ಗಳ ಬಗ್ಗೆ ನಾಯಕರಿಗೆ ಎಚ್ಚರಿಕೆ.. ಹೊಸ ನಿಯಮ ಜಾರಿ!



















