ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಬಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಿಸಿ ಪ್ರೊ. ನಿರಂಜನ ವಾನಳ್ಳಿ ಅವರ ಮೇಲೆ ಈ ಆರೋಪ ಕೇಳಿ ಬಂದಿದ್ದು, ವಿವಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕುಲಪತಿಗಳ ವಿರುದ್ಧ ಅಕ್ರಮವೆಸಗಿದ್ದಾರೆಂದು ಎಫ್.ಐ. ಆರ್ ದಾಖಲಾಗಿದೆ.
2021 ರ ನವೆಂಬರ್ ಉತ್ತರ ವಿವಿ ವಿಸಿಯಾಗಿ ಪ್ರೊ. ನಿರಂಜನ ವಾನಳ್ಳಿ, 125 ಸಿಸಿಟಿವಿ ಅಳವಡಿಕೆಯಲ್ಲಿ ಗೋಲ್ಮಾನ್ ಮಾಡಿದ್ದಾರೆಂಬ ಗಂಭೀರ ಆರೋಪ ಅತಿಥಿ ಉಪನ್ಯಾಸಕರು ಹಾಗೂ ವಿವಿ ವಿದ್ಯಾರ್ಥಿಗಳಿಂದಲೇ ಕೇಳಿ ಬರುತ್ತಿದೆ.
ವಿವಿಯಲ್ಲಿ ಅಕ್ರಮವೆಸಗಲಾಗಿದೆ ಎಂಬ ವಿಚಾರವನ್ನು ಬಯಲಿಗೆಳೆದ ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕರ ಮೇಲೆ ಸುಳ್ಳು ಆರೋಪವನ್ನೂ ವಾನಳ್ಳಿ ಹೊರಿಸಿದ್ದರು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಅಕ್ರಮ ಬಯಲಿಗೆಳೆದ ಅತಿಥಿ ಉಪನ್ಯಾಸಕನ ವಿರುದ್ಧ ಮಹಿಳಾ ಪೀಡಕ ಎಂಬ ಗಂಭೀರ ಆರೋಪವನ್ನೂ ಕೂಡ ಹೊರಿಸಿದ್ದರೆಂದು ಹೇಳಲಾಗಿದೆ.
ಮಾತ್ರವಲ್ಲದೇ, ಹತ್ತಾರು ವರ್ಷಗಳ ಕಾಲ ಇತಿಹಾಸವಿರುವ ಎರಡು ಪ್ರಮುಖ ಕೋರ್ಸ್ ಗಳನ್ನೇ ವಾನಳ್ಳಿ ವಿಶ್ವವಿದ್ಯಾಲಯದಿಂದ ತೆಗೆದು ಹಾಕಿದ್ದಾರೆನ್ನಲಾಗುತ್ತಿದೆ. ಪತ್ರಿಕೋದ್ಯಮ ಹಾಗೂ ಇಂಗ್ಲೀಷ್ ವಿಭಾಗವನ್ನು ಕುಲಪತಿಗಳು ಕ್ಲೋಸ್ ಮಾಡಿದ್ದಾರೆನ್ನಲಾಗಿದೆ.
ಸ್ವತಃ ಪ್ರೊ. ವಾನಳ್ಳಿ ಪತ್ರಿಕೋದ್ಯಮದಲ್ಲಿ PHD ಪಡೆದಿದ್ದರು. ಮೂಲತಃ ಪತ್ರಿಕೋದ್ಯಮ ಉಪನ್ಯಾಸಕರೂ ಕೂಡ ಆಗಿದ್ದರು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಅಂತ ಎರಡು ವಿಭಾಗಗಳನ್ನು ಕ್ಲೋಸ್ ಮಾಡಲು ವಾನಳ್ಳಿ ಸ್ವತಃ ನಿರ್ಧಾರ ತೆಗೆದುಕೊಂಡಿದ್ದರು. ವಿಸಿ ತೀರ್ಮಾನ ಇದೀಗ ಸಾವಿರಾರು ವಿದ್ಯಾರ್ಥಿಗಳ ಜೀವಕ್ಕೆ ಮಾರಕವಾಗಿ ಪರಿಣಮಿಸಿದೆ. ಸಿಂಡಿಕೇಟ್ ಸಭೆಯಲ್ಲಿ ಏಕಾಏಕಿ ನಿರ್ಧಾರ ಕೈಗೊಂಡು ವಿಭಾಗ ಮುಚ್ಚಲು ತೀರ್ಮಾನ ಮಾಡಲಾಗಿದ್ದು, ವಿವಿ ವಿಸಿ ನಡೆಗೆ ಸ್ವತಃ ಅತಿಥಿ ಉಪನ್ಯಾಸಕರೇ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಿಸಿ ವಿರುದ್ಧ ಪೊಲೀಸ್ ದೂರು ನೀಡಿದರೂ ಕೂಡ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದೇ ಹೇಳಲಾಗುತ್ತಿದೆ. ಕೊನೆಗೂ ಕೋರ್ಟ್ ನಿರ್ದೇಶನದ ಆಧಾರದ ಮೇಲೆ ಈಗ ವಿಸಿ ವಿರುದ್ಧ ಅತಿಥಿ ಉಪನ್ಯಾಸಕರು ಎಫ್.ಐ. ಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಭಾಗಗಳನ್ನು ಮುಚ್ಚಲು ಕಾರಣವೇನು ? :
- ಪತ್ರಿಕೋದ್ಯಮ, ಇಂಗ್ಲೀಷ್ ವಿಭಾಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳಿಲ್ಲ.
- 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ.
- ವಿದ್ಯಾರ್ಥಿಗಳ ಕಡಿಮೆ ಇದ್ದಿದ್ದರಿಂದ ವಿವಿಗೆ ಆರ್ಥಿಕ ಹೊರೆ.
- ಪತ್ರಿಕೋದ್ಯಮದಲ್ಲಿ ಇಬ್ಬರು, ಇಂಗ್ಲೀಷ್ ವಿಭಾಗದಲ್ಲಿ 10 ವಿದ್ಯಾರ್ಥಿಗಳ ವಿದ್ಯಾಭ್ಯಾಸ.
- ಸದ್ಯ ಪತ್ರಿಕೋದ್ಯಮ ವಿಭಾಗದಲ್ಲಿ ಇರುವ ಐವರು ಉಪನ್ಯಾಸಕರು.
- ಐವರು ಉಪನ್ಯಾಸಕರಿಗೆ 30 ಲಕ್ಷ ವೆಚ್ಚವಾಗುತ್ತಿದೆ ಎಂಬ ನೆಪ.



















