ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೊಡ್ಡ ಗರಿಮೆಯೊಂದು ಬಂದಿದೆ.
ಐಸಿಆರ್‌ಎ ಲಿಮಿಟೆಡ್, ಇಂಡಿಯಾ ರೇಟಿಂಗ್ಸ್ ಮತ್ತು ರೀಸರ್ಚ್ ಪ್ರೈವೆಟ್ ಲಿಮಿಟೆಡ್ ಹಾಗೂ ಕ್ರಿಸಿಲ್ ರೇಟಿಂಗ್ಸ್ ಲಿಮಿಟೆಡ್‌ನಿಂದ ಪ್ರತಿಷ್ಠಿತ ‘ತ್ರಿಬಲ್ ಎ’ (ಎಎಎ) ಮಾನ್ಯತೆಯು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಿಕ್ಕಿದೆ.
ಇದು ಹಣಕಾಸಿನ ಜವಾಬ್ದಾರಿಗಳ ಸಮಯೋಚಿತ ಸೇವೆ ಮತ್ತು ಕಡಿಮೆ ಕ್ರೆಡಿಟ್ ಅಪಾಯದ ಬಗ್ಗೆ ಹೆಚ್ಚಿನ ಮಟ್ಟದ ಸುರಕ್ಷತೆ ಹೊಂದಿರುವುದನ್ನು ತೋರಿಸುತ್ತದೆ. ವಾರ್ಷಿಕವಾಗಿ 51.5 ಮಿಲಿಯನ್ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯದ ಜತೆಗೆ, ಭಾರತದಲ್ಲಿ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ ಮತ್ತು ದಕ್ಷಿಣ ಭಾರತದಲ್ಲಿ ಅತಿ ದೊಡ್ಡದಾದ ಏರ್‌ಪೋರ್ಟ್ ಎಂಬ ಸ್ಥಾನವನ್ನು ಇದು ಎತ್ತಿ ತೋರಿಸುತ್ತದೆ.