ಬೆಂಗಳೂರು: ಅನಾಮಿಕನೊಬ್ಬ ಹಣಕ್ಕಾಗಿ ಬೇಡಿಕೆ ಇಟ್ಟು ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ.
ಮೊಹಮ್ಮದ್ ಇಕ್ಬಾಲ್ ಎಂಬಾತ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಆರೋಪಿ. ಜಯನಗರ 4ನೇ ಬ್ಲಾಕ್‌ನಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಾಲ್ಕು ಬಾಂಬ್ ಇಡಲಾಗಿದ್ದು, ಫೆಬ್ರುವರಿ 25ರರೊಳಗಾಗಿ 60 ಸಾವಿರ ಯುಎಸ್ ಡಾಲರ್ ಹಣವನ್ನು ಕ್ರಿಪ್ಟೋಕರೆನ್ಸಿ ಮೂಲಕ ಪಾವತಿಸಲು ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಹೊಸವರ್ಷದ ದಿನವೇ ಆರೋಪಿ ಬಾಂಬ್ ಬೆದರಿಕೆ ಮೇಲ್ ಕಳುಹಿಸಿದ್ದಾನೆ, ಆದರೆ ಶಾಲೆಯ ಪ್ರಿನ್ಸಿಪಾಲ್ ತಡವಾಗಿ ಮೇಲ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಾಂಬ್ ಬೆದರಿಕೆ ಮೇಲ್ ನೋಡಿ ಶಾಕ್ ಆಗಿದ್ದ ಪ್ರಿನ್ಸಿಪಾಲ್ ಕೂಡಲೇ ತಿಲಕ ನಗರ ಠಾಣೆಗೆ ದೂರು ನೀಡಿದ್ದಾರೆ.
ಪ್ರಿನ್ಸಿಪಾಲ್ ನೀಡಿದ ಮಾಹಿತಿ ಅನ್ವಯ ಶಾಲೆಗೆ ಭೇಟಿ ನೀಡಿದ ಪೊಲೀಸರು ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಿದ್ದಾರೆ. ಈವರೆಗೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಶಾಲೆಯ ಮೇಲೆ ಕಣ್ಣಿಟ್ಟು ಬೆದರಿಕೆ ಹಾಕಿದ್ದು, ಫೆಬ್ರವರಿ 25ರ ವರೆಗೂ ಎಂದು ಉಲ್ಲೇಖ ಹಿನ್ನೆಲೆ ಆಡಳಿತ ಮಂಡಳಿ ಪ್ರತೀ ದಿನ ಭಯದಲ್ಲೇ ಶಾಲೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭೀಕರ ಅಪಘಾತ | ಮರಕ್ಕೆ ಬೊಲೆರೊ ವಾಹನ ಡಿಕ್ಕಿ : ನಾಲ್ವರು ದುರ್ಮರಣ


















