ನವದೆಹಲಿ: ಟಾಟಾ ಕಂಪನಿಯು ತಮ್ಮ ಕಾರುಗಳ ಬಿಡುಗಡೆ ವೇಳೆ ವೈಶಿಷ್ಟ್ಯ ಮೆರೆಯುತ್ತವೆ. ತನ್ನ ಟಾಟಾ ಸಫಾರಿ ಎಸ್‌ಯುವಿಯಲ್ಲಿ ಕಾಂಜಿರಂಗ ಆವೃತ್ತಿ ಬಿಡುಗಡೆ ಮಾಡಿದ್ದ ಟಾಟಾ ಮೋಟಾರ್ಸ್ ಇದೀಗ ತನ್ನ ಮಧ್ಯಮ ಗಾತ್ರದ ಎಸ್‌ಯುವಿಯಲ್ಲಿ ಸಫಾರಿಯ ಹೊಸ ಎಡಿಷನ್ ಅನ್ನು ‘ಬಂಡೀಪುರ’ ಹೆಸರಿನಲ್ಲಿ ರಸ್ತೆಗಿಳಿಸಿದೆ.
ದೆಹಲಿಯ ಗ್ರೇಟರ್ ನೊಯಿಡಾದಲ್ಲಿ ನಡೆಯುತ್ತಿರುವ ಆಟೊ ಎಕ್ಸ್‌ಪೋದಲ್ಲಿ ಬಂಡೀಪುರ ವೇರಿಯೆಂಟ್ ಟಾಟಾ ಮೋಟಾರ್ಸ್ ಶನಿವಾರ ಅನಾವರಣಗೊಳಿಸಿದೆ. ಯುನೆಸ್ಕೊ ಮಾನ್ಯತೆ ಪಡೆದ ರಾಷ್ಟ್ರೀಯ ಉದ್ಯಾನಗಳಲ್ಲಿ ಅಸ್ಸಾಂನ ಕಾಜಿರಂಗ ಒಂದು. ಅಲ್ಲಿನ ಒಂದು ಕೊಂಬಿನ ಘೇಂಡಾಮೃಗದ ಚಿತ್ರವನ್ನು ತನ್ನ ಹಿಂದಿನ ಆವೃತ್ತಿಯ ಸಫಾರಿಯಲ್ಲಿ ಟಾಟಾ ಮುದ್ರಿಸಿತ್ತು. ಇದೀಗ ಬಂಡೀಪುರ ಆವೃತ್ತಿಯನ್ನು ಹೊರತಂದಿದ್ದು, ಆನೆಯನ್ನು ಕಾರಿನ ಒಂದು ಪಾರ್ಶ್ವದಲ್ಲಿ ಮುದ್ರಿಸಿದೆ.
ಬಂಡೀಪುರ ಸಂರಕ್ಷಿತಾರಾಣ್ಯ ಹುಲಿ, ಆನೆ ಹಾಗೂ ಇನ್ನಿತರ ಜೀವವೈವಿದ್ಯಗಳಿಗೆ ವಿಶ್ವದ ಮಾನ್ಯತೆ ಪಡೆದಿದೆ. ಬಂಡೀಪುರ ಎಡಿಷನ್ ಸಫಾರಿಯು ವಿನೂತನ ಬಣ್ಣದಲ್ಲಿ ಲಭ್ಯ. ಕಪ್ಪು ಬಣ್ಣದ ಟಾಪ್ , ಇಂಟೀರಿಯನಲ್ಲೂ ಹಲವು ಬದಲಾವಣೆಗಳನ್ನು ಕಂಪನಿ ಮಾಡಿದೆ. ಸಫಾರಿಯ ಹೊರಭಾಗದ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಕಪ್ಪು ಅಲಾಯ್ ವೀಲ್, ಕಪ್ಪು ಬಣ್ಣದ ಒಆರ್‌ವಿಎಂ ಇದೆ. ಕಾರು ಬಂಡೀಪುರ ಎಡಿಷನ್ ಎಂದು ಸಾರಲು ಹಲವೆಡೆ ಇದರ ಲಾಂಛನ ಬಳಸಲಾಗಿದೆ.
ಕಾರಿನ ಒಳಭಾಗದಲ್ಲೂ ಗಜರಾಜನ ಬಣ್ಣವನ್ನೇ ಹೆಚ್ಚಾಗಿ ಬಳಕೆ ಮಾಡಲಾಗಿದೆ. ಕ್ಯಾಬಿನ್‌ನಲ್ಲಿ ಎರಡು ಬಣ್ಣಗಳ ಡ್ಯಾಷ್ ಬೋರ್ಡ್ ಇದೆ. ಸೀಟಿನ ಹೆಡ್‌ರೆಸ್ಟ್‌ನಲ್ಲಿ ಹೊಸ ಮಾದರಿಯ ಲಾಂಛನಬಳಸಲಾಗಿದೆ. ಇದರೊಂದಿಗೆ 12.3 ಇಂಚಿನ ಇನ್ಫೊಟೈನ್ಮೆಂಟ್ ಪರದೆ, ಮುಂಭಾಗದ ಸೀಟ್‌ಗಳು ವೆಂಟಿಲೇಟೆಡ್ ಹಾಗೂ ಪವರ್ ಮೋಡ್ ಹೊಂದಿವೆ. ಟೈಲ್‌ಗೇಟ್ ಕೂಡಾ ವಿದ್ಯುತ್ ಚಾಲಿತವಾಗಿದೆ. ಡುಯಲ್ ಟೋನ್ ಕ್ಲೈಮೆಟ್ ಕಂಟ್ರೋಲ್ ಎಸಿ, 360 ಡಿಗ್ರಿ ಕ್ಯಾಮೆರಾ ಮತ್ತು 2ನೇ ಹಂತ ಅಡಾಸ್ ಇದರಲ್ಲಿದೆ.
2 ಲೀಟರ್ ಸಾಮರ್ಥ್ಯದ ಡೀಸೆಲ್ ನೀಡಲಾಗಿದ್ದು. 170 ಹಾರ್ಸ್‌ಪವರ್ ಹಾಗೂ 350 ಎನ್‌ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. . ಆರು ಗೇರ್‌ಗಳ ಮ್ಯಾನುಯಲ್ ಹಾಗೂ ಆಟೊ ಗೇರ್‌ಗಳು ಲಭ್ಯ.