ಬೆಂಗಳೂರು : ರಾಜ್ಯದಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ. ಮೊಬೈಲ್ ಅಡಿಕ್ಷನ್ಗೆ ನಿಯಂತ್ರಣ ಹೇರುವ ಬಗ್ಗೆ ಚರ್ಚೆ ಜೋರಾಗಿದ್ದು, 16 ವರ್ಷದೊಳಗಿನ ಮಕ್ಕಳು ಶಾಲೆ ಮತ್ತು ಕಾಲೇಜು ಆವರಣದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿರ್ಬಂಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಮತ್ತೊಂದೆಡೆ SOP ರಚನೆಗೆ ಖಾಸಗಿ ಶಾಲಾ ಒಕ್ಕೂಟ ಕ್ಯಾಮ್ಸ್ ಆಗ್ರಹಿಸಿದೆ.
ಇತ್ತೀಚೆಗೆ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿದ್ಯಾರ್ಥಿಗಳ ಮೇಲೆ ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾ ದುಷ್ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸರ್ಕಾರ 16 ವರ್ಷದೊಳಗಿನ ಮಕ್ಕಳ ಮೊಬೈಲ್ ಬಳಕೆಗೆ ಬ್ರೇಕ್ ಹಾಕುವ ಚಿಂತನೆ ನಡೆಸಿದೆ ಎಂದು ತಿಳಿಸಿದ್ದರು.
ಇದೀಗ ಮಕ್ಕಳ ಮೊಬೈಲ್ ಅಡಿಕ್ಷನ್ಗೆ ಶತಾಯ ಗತಾಯ ಬ್ರೇಕ್ ಹಾಕಲು ಖಾಸಗಿ ಶಾಲಾ ಒಕ್ಕೂಟ ಕ್ಯಾಮ್ಸ್ ಮನವಿ ಮಾಡಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ನಿಷೇಧ ಮಾಡ್ಬೇಕು ಎಂದು ಆಗ್ರಹಿಸಿದೆ.
ಸರ್ಕಾರ ನಿಯಂತ್ರಿತ ಸ್ಟೂಡೆಂಟ್ ಇಂಟರ್ನೆಟ್ ಪ್ಯಾಕ್ ಪರಿಚಯಿಸಬೇಕು. 16-18 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧವೇರಿ ಹಾಗೂ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ SOP ರಚನೆ ಮಾಡುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ 14 ರಿಂದ 16 ವರ್ಷ್ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಅನೇಕ ದೇಶಗಳಲ್ಲಿ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ್ದು, ರಾಜ್ಯದಲ್ಲೂ SOP ರಚನೆ ಮಾಡಬೇಕು. ಕೋಚಿಂಗ್ ಸೆಂಟರ್ ಬಳಕೆಗೂ ಕಡಿವಾಣ ಹಾಕ್ಬೇಕು ಎಂದು ರಾಜ್ಯಮಟ್ಟದ SOPಗೆ ಕ್ಯಾಮ್ಸ್ ಶಿಫಾರಸು ಮಾಡಿದೆ. ಸಾಮಾಜಿಕ ಜಾಲತಾಣ ಬಳಕೆ ಹಾಗೂ ಗೇಮಿಂಗ್ ಆ್ಯಪ್ಗಳು ವಿದ್ಯಾರ್ಥಿಗಳನ್ನ ಅಡ್ಡ ದಾರಿಗೆ ಎಳೆದಿದೆ. ಹೀಗಾಗಿ ಟೆಲಿಕಾಮ್ ಕಂಪನಿಗಳ ಸಹಯೋಗದಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಬ್ರೇಕ್ ಹಾಕುವಂತೆಯೂ ಕ್ಯಾಮ್ಸ್ ಅಗ್ರಹಿಸಿದೆ.
ಇದನ್ನೂ ಓದಿ : ಮಮತಾ ಬ್ಯಾನರ್ಜಿ ಆಪ್ತ, ಪಶ್ಚಿಮ ಬಂಗಾಳ ರಾಜಕೀಯದ ‘ಚಾಣಕ್ಯ’ ಮುಕುಲ್ ರಾಯ್ ಇನ್ನಿಲ್ಲ



















