ನವದೆಹಲಿ: ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾನ್ ಐಪಿಎಲ್ 2025ರ ಕಾಮೆಂಟರಿ ಪ್ಯಾನಲ್‌ನ ಭಾಗವಾಗಿಲ್ಲ. 2020ರಲ್ಲಿ ಕ್ರಿಕೆಟ್ ನಿವೃತ್ತಿ ಹೊಂದಿದ ಪಠಾನ್, ಒಡಿಐ ಮತ್ತು ಟಿ20 ವಿಶ್ವಕಪ್‌ಗಳ ಹಾಗೂ ಐಪಿಎಲ್ನಲ್ಲಿ ಕಾಮೆಂಟರಿ ಸೇವೆ ಸಲ್ಲಿಸಿದ್ದರು. ಆದರೆ, ಪ್ರಸಾರಕ ಸಂಸ್ಥೆಗಳು ಅತೃಪ್ತಿ ಹೊಂದಿದ ಕಾರಣ ಅವರನ್ನು ಹೊರಗಿಡಲಾಗಿದೆ ಎಂದು ತಾಜಾ ವರದಿಗಳು ತಿಳಿಸಿವೆ.
ಪಠಾನ್ ಆಟಗಾರರ ಜತೆಗಿನ ತಮ್ಮ ವೈಯಕ್ತಿಕ ದ್ವೇಷವನ್ನು ಕಾಮೆಂಟರಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶಿಸುತ್ತಾರೆ ಎಂದು ಪ್ರಸಾರಕ ಸಂಸ್ಥೆಗಳು ಎಂದು ಆರೋಪಿಸಿವೆ. “ಪಠಾನ್ ಕೆಲವು ಆಟಗಾರರೊಂದಿಗೆ ಕೆಲವು ವರ್ಷಗಳ ಹಿಂದೆ ವೈಷಮ್ಯ ಹೊಂದಿದ್ದರು. ಅವರು ಆ ಆಟಗಾರರ ಬಗ್ಗೆ ಕಾಮೆಂಟರಿ ವೇಳೆ ಆಕ್ರಮಣಕಾರಿ ಟೀಕೆಗಳನ್ನು ಮಾಡುತ್ತಿದ್ದರು. ಅವರು ಹೆಸರು ಹೇಳದೆಯೇ ಸೋಶಿಯಲ್ ಮೀಡಿಯಾದಲ್ಲಿ ಅವರ ಮೇಲೆ ಆಕ್ರಮಣಕಾರಿ ಹೇಳಿಕೆ ನೀಡುತ್ತಿದ್ದಾರೆ” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಇರ್ಫಾನ್ ಪಠಾನ್ ಇತ್ತೀಚೆಗೆ “ಸೀದಿ ಬಾತ್ ವಿತ್ ಇರ್ಫಾನ್ ಪಠಾನ್” ಎಂಬ ಹೊಸ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾರೆ ಮತ್ತು ಪಂದ್ಯಗಳ ವಿಶ್ಲೇಷಣೆ ನೀಡುತ್ತಿದ್ದಾರೆ.
ಹಿಂದೆಯೂ ಆಗಿದ್ದವು
2016ರಲ್ಲಿ, 1980ರ ದಶಕದಿಂದಲೂ ಭಾರತೀಯ ಕ್ರಿಕೆಟ್‌ನ ಪ್ರತಿಷ್ಠಿತ ಕಾಮೆಂಟೇಟರ್ ಆಗಿದ್ದ ಹರ್ಷ ಭೋಗ್ಲೆ ಅವರನ್ನೂ ಕಾಮೆಂಟರಿ ಸೇವೆಯಿಂದ ಬಿಸಿಸಿಐ ಹೊರಹಾಕಿತು. 54 ವರ್ಷದ ಬೋಗ್ಲೆ ಆ ವರ್ಷದ ಐಪಿಎಲ್ ಡ್ರಾಫ್ಟ್ ಲಾಟರಿ ಹೋಸ್ಟ್ ಮಾಡಿದ್ದರು, ಲೀಗ್‌ಗಾಗಿ ಪ್ರಚಾರ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು ಮತ್ತು ಪ್ರೊಡಕ್ಷನ್ ಹೌಸ್ ಅವರ ಫ್ಲೈಟ್ ಟಿಕೆಟ್‌ಗಳನ್ನು ಏರ್ಪಡಿಸಿತ್ತು. “ನಾವು ಕಾಮೆಂಟೇಟರ್‌ಗಳನ್ನು ಆಯ್ಕೆ ಮಾಡುವಾಗ ಎಲ್ಲರಿಂದಲೂ ಪ್ರತಿಕ್ರಿಯೆಗಳನ್ನು ಪಡೆಯುತ್ತೇವೆ. ನಾವು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟೇಟರ್‌ಗಳ ಬಗ್ಗೆ ಬರುವ ಪ್ರತಿಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡುತ್ತೇವೆ ಮತ್ತು ಆಟಗಾರರಿಂದಲೂ ಮಾಹಿತಿ ಪಡೆಯುತ್ತೇವೆ” ಎಂದು BCCI ಅಧಿಕಾರಿ ಹೇಳಿದ್ದಾರೆ.
2020ರಲ್ಲಿ, ಸಂಜಯ್ ಮಂಜ್ರೇಕರ್‌ಗೆ ಬಿಸಿಸಿಐ ನಿಷೇಧ ಹೇರಿತ್ತು. ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಅವರೊಂದಿಗೆ ಸಾರ್ವಜನಿಕವಾಗಿ ವಾಗ್ವಾದ ನಡೆದ ನಂತರ ಈ ನಿರ್ಣಯ ತೆಗೆದುಕೊಳ್ಳಲಾಯಿತು. 2019 ODI ವಿಶ್ವಕಪ್‌ನಲ್ಲಿ ಮಂಜ್ರೇಕರ್ ಅವರು ಜಡೇಜಾ ಅವರನ್ನು “ಬಿಟ್ಸ್ ಅಂಡ್ ಪೀಸಸ್” ಕ್ರಿಕೆಟರ್ ಎಂದು ಕರೆದಿದ್ದರು. ಇದರ ಪ್ರತಿಕ್ರಿಯೆಯಾಗಿ ಜಡೇಜಾ ಸೋಶಿಯಲ್ ಮೀಡಿಯಾದಲ್ಲಿ, “ನಾನು ನಿಮ್ಮ ಎರಡರಷ್ಟು ಪಂದ್ಯಗಳಲ್ಲಿ ಆಡಿದ್ದೇನೆ ಮತ್ತು ಇನ್ನೂ ಆಡುತ್ತಿದ್ದೇನೆ. ಸಾಧನೆ ಮಾಡಿದ ಜನರನ್ನು ಗೌರವಿಸಲು ಕಲಿಯಿರಿ. ನಿಮ್ಮ ಮಾತಿನ ಸಾರದ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ” ಎಂದು ಹೇಳಿದ್ದರು. ವಿವಾದದ ನಂತರ, ಮಂಜ್ರೇಕರ್ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ಜಡೇಜಾ ಕ್ರೀಡಾಂಗಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿಕೆ ನೀಡಿದರು.
ನಿಷೇಧದ ನಂತರ, ಮಂಜ್ರೇಕರ್ ಐಪಿಎಲ್ 2021ಕ್ಕೆ ಕಾಮೆಂಟೇಟರ್ ಆಗಿ ಮರಳಲು ಬಿಸಿಸಿಐಗೆ ಇಮೇಲ್ ಕಳುಹಿಸಿದ್ದರು. ಈ ವಿವಾದದ ಜೊತೆಗೆ, ಮಂಜ್ರೇಕರ್ 2019ರಲ್ಲಿ ಈಡನ್ ಗಾರ್ಡನ್ಸ್ ನಡೆದ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವಿನ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಹರ್ಷ ಭೋಗ್ಲೆ ಅವರೊಂದಿಗೆ ಕೂಡಿದ ಚರ್ಚೆ ನಡೆಸಿದ್ದರು.