ಬೆಂಗಳೂರು : ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲು ನಿನ್ನೆ (ಶುಕ್ರವಾರ) ಬೆಂಗಳೂರಿನ ನ್ಯಾಯಾಲಯವು ಅಪರಾಧ ತನಿಖಾ ದಳಕ್ಕೆ (CID) ನಿರ್ದೇಶನ ನೀಡಿದೆ.
ಬಂಧನ ನಂತರ ಹೃದಯ ಸಂಬಂಧಿ ತೊಂದರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ಅವರನ್ನು ಸಮಗ್ರ ಹೃದಯ ಪರೀಕ್ಷೆಗಾಗಿ ಶ್ರೀ ಜಯದೇವ ಹೃದಯ ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಸ್ಥಳಾಂತರಿಸಲು ನ್ಯಾಯಾಲಯ ಆದೇಶಿಸಿತ್ತು.
ಇದಕ್ಕೂ ಮುನ್ನ ಅವರನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಹೃದಯ ಸಂಬಂಧಿತ ಸಮಸ್ಯೆಗಳ ಸಾಧ್ಯತೆ ಇರುವುದಾಗಿ ಸೂಚಿಸಿ, ವಿಶೇಷ ಹೃದ್ರೋಗ ಆಸ್ಪತ್ರೆಗೆ ಹೆಚ್ಚಿನ ಪರೀಕ್ಷೆಗಳನ್ನು ಮಾಡಲು ಶಿಫಾರಸು ಮಾಡಿದ್ದರು. ವೈದ್ಯಕೀಯ ಅಭಿಪ್ರಾಯದ ಹಿನ್ನೆಲೆಯಲ್ಲಿ, ಜಯದೇವ ಆಸ್ಪತ್ರೆಗೆ ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ಬಸವರಾಜ್ ಅವರ ಸಂಪೂರ್ಣ ಪರೀಕ್ಷೆ ನಡೆಯುವಂತೆ ತನಿಖಾ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತು.
ಅವರು ಸಿಐಡಿ ವಶದಲ್ಲೇ ಇರುವುದರಿಂದ, ವೈದ್ಯಕೀಯ ಪರೀಕ್ಷೆಗಳು ಅಧಿಕೃತ ಮೇಲ್ವಿಚಾರಣೆಯಲ್ಲಿ ನಡೆಯಲಿವೆ. ಜೊತೆಗೆ, ವೈದ್ಯಕೀಯ ವರದಿಗಳೊಂದಿಗೆ ಇಂದು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಸಿಐಡಿಗೆ ಸೂಚಿಸಿದೆ. ವೈದ್ಯಕೀಯ ವರದಿ ಆಧಾರದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವುದೇ ಅಥವಾ ಹೆಚ್ಚಿನ ವಿಚಾರಣೆಗೆ ಸಿಐಡಿ ವಶಕ್ಕೆ ನೀಡುವುದೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ.
ಇದನ್ನೂ ಓದಿ : ಹಾಸನ | ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ



















