ಬಾಗಲಕೋಟೆ: ಆನ್‌ಲೈನ್ ಬೆಟ್ಟಿಂಗ್ ಗೀಳು, ಸಾಲಬಾಧೆಯಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಬಾಗಲಕೋಟೆಯ ಜಮಖಂಡಿ ನಗರದ ಚೌಡಯ್ಯ ನಗರದಲ್ಲಿ ನಡೆದಿದೆ.
ರಮೇಶ್ ಬಂಟನೂರು(೨೧) ಆತ್ಮಹತ್ಯೆಗೆ ಶರಣಾದ ಯುವಕ. ತಂದೆ ಬೈದು ಬುದ್ದಿ ಹೇಳಿದಕ್ಕೆ ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಬಿಸಿಎ ಪ್ರಥಮ ವರ್ಷ ಓದುತ್ತಿದ್ದ ಯುವಕ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ. ತಂದೆ ಎರಡು ಬಾರಿ ಸಾಲ ತೀರಿಸಿದ್ದರು. ಇದೀಗ ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸದ್ಯ ಸ್ಥಳಕ್ಕೆ ಜಮಖಂಡಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನಾ ಸಂಬಂಧ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರರಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತಾಯಿ ಹುಲಿ ಜೊತೆ ಮರಿಗಳು ಕಂಡ ಪ್ರಕರಣ | ಚಾ.ನಗರದಲ್ಲಿ 10 ತಿಂಗಳ ಮರಿ ಸೆರೆ



















