ದಾವಣಗೆರೆ: ಎಸ್ಸಿ ಒಳಮೀಸಲಾತಿ ಜಾರಿ ಹಿನ್ನೆಲೆ, ಶ್ರೀ ಕ್ಷೇತ್ರ ಸೂರಗೊಂಡನಕೊಪ್ಪಗೆ ಬಂದಿದ್ದ ಕಾಂಗ್ರೇಸ್ ನಾಯಕ, ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿಯನ್ನು ಲಂಬಾಣಿ ಸಮುದಾಯದ ಜನರು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸಂತ ಸೇವಾಲಾಲ್ ಸ್ವಾಮೀಜಿಗಳ ಪುಣ್ಯಕ್ಷೇತ್ರವಾದ ಸೂರಗೊಂಡನಕೊಪ್ಪದಲ್ಲಿ ದೇವಸ್ಥಾನ ಸಮಿತಿ ವಾರ್ಷಿಕ ಮಹಾ ಸಭೆಗೆ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಹಾಗೂ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್ ಆಗಮಿಸಿದ್ದರು.
ಈ ವೇಳೆ ಲಂಬಾಣಿ ಸಮುದಾಯದ ಜನರು ಎಸ್ಸಿ ಒಳ ಮೀಸಲಾತಿ ಜಾರಿಯಾಗಿದ್ದರಿಂದ ಲಂಬಾಣಿ ಸಮುದಾಯಕ್ಕೆ ಅನ್ಯಾಯ ಆಗಿದೆ. ರಾಜ್ಯ ಸರ್ಕಾರದಲ್ಲಿ ಸಮಾಜದ ಪ್ರತಿನಿಧಿಗಳಾಗಿ ನೀವು ಧ್ವನಿ ಎತ್ತಬೇಕಿತ್ತು. ಅದನ್ನು ನೀವು ಮಾಡಲಿಲ್ಲ ಎಂದು ಮೀಸಲಾತಿ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ.
ಎರಡು ಕಡೆಯಿಂದ ವಾಗ್ವಾದ ಶುರುವಾದ ಹಿನ್ನೆಲೆ ಪೊಲೀಸರು ಮಧ್ಯ ಪ್ರವೇಶಿಸಿದ್ದು, ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಗೊಂದಲ ಸೃಷ್ಠಿಯಾಗಿತ್ತು.