ಮಂಡ್ಯ : ಬೇಕರಿಯ ಕೇಕ್ ತಿಂದು ಮಗು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ಆನಂದ್ ಎಂಬುವವರು ನೀಡಿದ ದೂರಿನ ಮೇರೆಗೆ ಕ್ರಮ. ಪುರಸಭೆಯಿಂದ ಎರಡು ಬೇಕರಿಗೆ ಬೀಗ ಹಾಕಲಾಗಿದೆ. ಆನಂದ್ ಈ ಬೇಕರಿಯಲ್ಲಿ ಐಸ್ ಕೇಕ್ ಖರೀದಿಸಿ ತಮ್ಮ ಮಗುವಿಗೆ ತಿನ್ನಿಸಿದ್ದರು. ಕೇಕ್ ತಿಂದ ಬಳಿಕ ಮಗು ಅಸ್ವಸ್ಥಗೊಂಡಿತ್ತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಫುಡ್ ಪಾಯಿಸನ್ ಆಗಿರುವುದಾಗಿ ವೈದ್ಯರ ಮಾಹಿತಿಯ ಆಧರಿಸಿ ಪುರಸಭೆಗೆ ಆನಂದ್ ದೂರು ನೀಡಿದ್ದರು.
ಆನಂದ್ ನೀಡಿರುವ ದೂರಿನ ಆಧಾರದ ಮೇಲೆ ಪಟ್ಟಣದ ಎರಡು ಬೇಕರಿಗಳ ಮೇಲೆ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಅಶುಚಿತ್ವ ಕಂಡು ಬಂದ ಹಿನ್ನೆಲೆ ಬೇಕರಿಗಳಿಗೆ ಬೀಗ ಹಾಕಲಾಗಿದೆ. ಶುಚಿತ್ವ ಕಾಪಾಡುವಂತೆ ಪಟ್ಟಣದ ಬೇಕರಿಗಳಿಗೆ ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



















