ನವದೆಹಲಿ : ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ನನ್ನು ಅಮೆರಿಕ ಗಡಿಪಾರು ಮಾಡಿದ್ದು, ಬುಧವಾರ ದೆಹಲಿಗೆ ಬಂದಿಳಿದ ಆತನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಕ್ಕೆ ಪಡೆದುಕೊಂಡಿದೆ. ದೆಹಲಿ ಏರ್ಪೋರ್ಟ್ನಿಂದ ನೇರವಾಗಿ ಆತನನ್ನು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ.

ನವೆಂಬರ್ 18 ರಂದು ಅಮೆರಿಕದಿಂದ ಗಡಿಪಾರಾಗಿದ್ದ ಅನ್ಮೋಲ್ ಬಿಷ್ಣೋಯ್, ಭಾರತಕ್ಕೆ ಆಗಮಿಸುತ್ತಿದ್ದಂತೆ ಎನ್ಐಎ ತಂಡ ಆತನನ್ನು ವಶಕ್ಕೆ ಪಡೆದಿದೆ. ಇಬ್ಬರು ಎನ್ಐಎ ಅಧಿಕಾರಿಗಳ ನಡುವೆ ಅನ್ಮೋಲ್ ಇರುವ ಮೊದಲ ಚಿತ್ರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹಲವು ಪ್ರಕರಣಕ್ಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್
ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಸಂಚು, ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಮತ್ತು ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ನಡೆದಿದ್ದ ಗುಂಡಿನ ದಾಳಿ ಸೇರಿದಂತೆ ಕನಿಷ್ಠ 18 ಕ್ರಿಮಿನಲ್ ಪ್ರಕರಣಗಳು ಅನ್ಮೋಲ್ ಮೇಲೆ ದಾಖಲಾಗಿದೆ.
ಅನ್ಮೋಲ್ ರಕ್ಷಣೆಗೆ ಆಗ್ರಹ
ʻಅನ್ಮೋಲ್ ಸುರಕ್ಷತೆಯಿಂದ ಕಾಪಾಡಿಕೊಳ್ಳುವುದುಭಾರತ ಸರ್ಕಾರದ ಜವಾಬ್ದಾರಿ. ನಮ್ಮ ಕುಟುಂಬ ಕಾನೂನನ್ನು ಗೌರವಿಸುತ್ತದೆ. ಆದರೆ ಕೇವಲ ಲಾರೆನ್ಸ್ ಬಿಷ್ಣೋಯ್ನ ತಮ್ಮನಾದ ಕಾರಣಕ್ಕೆ ಅವನಿಗೆ ಶಿಕ್ಷೆಯಾಗುತ್ತಿದೆ. ಅನ್ಮೋಲ್ ತಪ್ಪೇನು ಇಲ್ಲ.ತನಿಖೆಯಿಂದ ಎಲ್ಲವೂ ಬಹಿರಂಗವಾಗಲಿದೆʼ ಎಂದು ಅನ್ಮೋಲ್ ಸಂಬಂಧಿ ರಮೇಶ್ ಬಿಷ್ಣೋಯ್ ಸುದ್ದಿ ಸಂಸ್ಥಗಳ ಜೊತೆ ಮಾತನಾಡಿದ್ದಾರೆ.
ಇದನ್ನೂ ಓದಿ : ‘ತುಂಬಾ ಚಳಿಯಿದೆ.. ಮಲಗಲು ಆಗುತ್ತಿಲ್ಲ’ ಬೆಡ್ಶೀಟ್ ಕೊಡಿಸುವಂತೆ ಜಡ್ಜ್ ಮುಂದೆ ನಟ ದರ್ಶನ್ ಮನವಿ!



















