ರಾಜ್ಯಕ್ಕೆ ಕಳೆದ ವಾರ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಬಿ. ವೈ.ವಿಜಯೇಂದ್ರಗೆ ಸಾಲು ಸಾಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ ವಾರ ರಾಜ್ಯಕ್ಕೆ ಎರಡು ದಿನಗಳ ಕಾಲ ಪ್ರವಾಸಕ್ಕೆಂದು ಆಗಮಿಸಿದ್ದ ನಡ್ಡಾ, ದೆಹಲಿಗೆ ತೆರಳುವ ಮುನ್ನಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸಲಹೆಗಳನ್ನು ನೀಡಿದ್ದು, ರಾಜ್ಯ ಬಿಜೆಪಿ ಘಟಕದಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ, ವಿಜಯೇಂದ್ರಗೆ ನಡ್ಡಾ ಕೊಟ್ಟಿರುವ ಸಲಹೆ, ಸೂಚನೆಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸಾಲು ಸಾಲು ಸಲಹೆ ಕೊಟ್ಟಿದ್ದಾರೆ. ಈಗಾಗಲೇ ರಾಷ್ಟ್ರೀಯ ಬಿಜೆಪಿ ಘಟಕದ ಅಧ್ಯಕ್ಷರಾಗಿ, ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಕೇಂದ್ರದ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ನಡ್ಡಾ, ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸಕ್ಸಸ್ ಫಾರ್ಮುಲಾ ಟೀಚ್ ಮಾಡಿದ್ದಾರೆ ಎಂಬ ಮಾತುಗಳು ರಾಜ್ಯ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ಕಳೆದ ವಾರ ಬೆಂಗಳೂರಿಗೆ ಆಗಮಿಸಿದ್ದ ಜೆ.ಪಿ.ನಡ್ಡಾ, ವಿಜಯೇಂದ್ರರ ಜೊತೆಗೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ, ಭೇಟಿಯ ವೇಳೆ, ನಡ್ಡಾ ವಿಜಯೇಂದ್ರಗೆ ಕೊಟ್ಟಿರುವ ಸಲಹೆಗಳಾದ್ರೂ ಏನು?
- ನೀವು ಇನ್ನು ವಯಸ್ಸಿನಲ್ಲಿ ಸಣ್ಣವರು.
- ನಿಮಗೆ ಅನುಭವ ಇದೆ. ಅದನ್ನು ನಿಮಗಿಂತ ವಯಸ್ಸಿನಲ್ಲಿ ಹಿರಿಯರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.
- ನೀವು ಚಾಣಾಕ್ಷತನದಿಂದ ಎಲ್ಲವನ್ನೂ ಸಾಧಿಸುವ ಶಕ್ತಿ ಹೊಂದಿರಬಹುದು.
- ನೀವು ರಸ್ತೆಯಲ್ಲಿ ನೀವು ಸರಿಯಾಗಿ ಹೋಗುತ್ತಿದ್ರೂ ಅಕ್ಕಪಕ್ಕದವರು ಸರಿಯಾಗಿ ಹೋಗುತ್ತಿರುವುದಿಲ್ಲ.
- ನಿಮ್ಮ ಎಚ್ಚರಿಕೆ ನಿಮ್ಮ ಜೊತೆಗೆ ಇರಬೇಕು.
- ಈಗಾಗಲೇ ತಾವು ಕೂಡ ಒಂದು ವರ್ಷದಿಂದ ರಾಜ್ಯಾಧ್ಯಕ್ಷರ ಹುದ್ದೆ ನಿಭಾಯಿಸಿದ್ದೀರಿ.
- ರಾಜಕಾರಣ ಅರಿತಿದ್ದೀರಿ.
- ನಿಮ್ಮವರು ಯಾರು? ನಿಮ್ಮವರು ಯಾರು ಅಲ್ಲ? ಎಂಬುದು ಗೊತ್ತಿದೆ.
- ನೀವು ಮೊದಲು ಅದನ್ನೆಲ್ಲಾ ಪಕ್ಕಕ್ಕಿಟ್ಟು, ನಿಮ್ಮ ತಂಡ ಬಲಿಷ್ಠಗೊಳಿಸಿಕೊಳ್ಳಿ.
- ನಿಮ್ಮ ಕೆಳಗೆ ಸಂಘಟನಾತ್ಮಕವಾಗಿ ಕಾರ್ಯನಿರ್ವಹಣೆ ಮಾಡುವ ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ 6 ಮೋರ್ಚಾಗಳ ಅಧ್ಯಕ್ಷರನ್ನು ಬಲಪಡಿಸಿ.
- ಕಳೆದೊಂದು ವರ್ಷದ ಈ ಒಟ್ಟು 10 ಮಂದಿ ಕಾರ್ಯವೈಖರಿ ಗಮನಿಸಿ.
- ನಿಮಗೆ ತೃಪ್ತಿ ತಂದಿಲ್ಲವಾದ್ರೆ, ಅವರನ್ನು ಕೂಡಲೇ ಬದಲಾವಣೆ ಮಾಡಿಕೊಳ್ಳಿ.
- ಕಾರಣವೇನೆಂದರೆ, ನೀವು ರಾಜ್ಯ ಪ್ರವಾಸ ಮಾಡುವಾಗ, ಅವರುಗಳು ಕೂಡ ನಿಮ್ಮ ಜೊತೆಗೆ ಸಹಕರಿಸಬೇಕು.
- ಇಲ್ಲವಾದ್ರೆ, ಸಂಘಟನಾತ್ಮಕವಾಗಿ ಪೆಟ್ಟು ಬೀಳುತ್ತದೆ.
- ಮುಂದಿನ ಮೂರು ವರ್ಷಗಳಲ್ಲಿ ಚುನಾವಣೆ ಎದುರಾಗಲಿದೆ.
- ಆ ಚುನಾವಣೆಯಲ್ಲಿ ನಾವು ಗೆಲ್ಲಬೇಕು ಅಂದರೆ, ಈಗಿನಿಂದಲೇ ಕೆಲಸ ಮಾಡುವುದು ಅನಿವಾರ್ಯ.
- ಹೀಗಾಗಿ, ನಿಮಗೆ ಒಂದು ವೇಳೆ ನಿಮ್ಮ ತಂಡದಲ್ಲಿನ ಈ 10 ಮಂದಿಯ ಕಾರ್ಯವೈಖರಿ ತೃಪ್ತಿ ತಂದಿಲ್ಲವಾದ್ರೆ, ಮೊದಲು ಅವರನ್ನು ಬದಲಾವಣೆ ಮಾಡಿಕೊಳ್ಳಿ.
- ಕಳೆದೊಂದು ವರ್ಷದಿಂದ ಸಹಕಾರ ನೀಡಿದ, ನಿರೀಕ್ಷೆಗೆ ಮೀರಿದ ಕಾರ್ಯ ಮಾಡದ ಪದಾಧಿಕಾರಿಗಳನ್ನು ಬದಲಾವಣೆ ಮಾಡಿ.
ರಾಜ್ಯ ಬಿಜೆಪಿ ಘಟಕದಲ್ಲಿ ನಾಲ್ವರು ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ರೆ, ಇತ್ತ 6 ಮೋರ್ಚಾಗಳು ಸಕ್ರಿಯವಾಗಿದೆ. ಈ 10 ಮಂದಿ ಕೂಡ ಬಹಳ ಆ್ಯಕ್ಟೀವ್ ಆಗಿ ಕಾರ್ಯನಿರ್ವಹಣೆ ಮಾಡಬೇಕು. ಇಲ್ಲವಾದ್ರೆ, ಸಂಘಟನಾತ್ಮಕವಾಗಿ ಹಿನ್ನಡೆಯಾಗುತ್ತದೆ ಎಂಬ ಕಿವಿ ಮಾತನ್ನ ಖುದ್ದು ನಡ್ಡಾ ತಿಳಿಸಿದ್ದಾರೆ.
ಇನ್ನು ರಾಷ್ಟ್ರೀಯಾಧ್ಯಕ್ಷ ನಡ್ಡಾ, ಶೀಘ್ರದಲ್ಲೇ ಸ್ಥಾನದಿಂದ ಕೆಳಗೀಳಿಯಲಿದ್ದು, ಅವರ ಸಲಹೆ ಸೂಚನೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಲಿಸಿದ್ದಾರೆ. ಒಬ್ಬ ಹಿರಿಯ ರಾಜಕಾರಣಿಯಾಗಿ ಪಕ್ಷದ ಸಾರಥ್ಯ ವಹಿಸಿದ್ದ ನಡ್ಡಾ, ವಿಜಯೇಂದ್ರಗೆ ನಿರ್ಗಮಿಸುವ ಮುನ್ನಾ ಗೆಲುವಿನ ಸೀಕ್ರೆಟ್ ಅಂತೂ ತಿಳಿಸಿದ್ದು, ಇದನ್ನು ವಿಜಯೇಂದ್ರ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತೆಗೆದುಕೊಂಡು ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.