ಹೋರಾಟಗಾರ್ತಿ ಬಿ.ಟಿ ಲಲಿತಾ ನಾಯಕ್ ಅವರು ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ಧಾರೆ.
ಮಾಜಿ ಸಚಿವೆ ಲಲಿತಾ ನಾಯಕ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ, ಪಂಚಶೀಲ ತಂಡ ಇಂದು ಕಾಂಗ್ರೆಸ್ಸಿಗೆ ಸೇರಿದ್ದೇವೆ. ಡಿಕೆಶಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗ್ತಿದ್ದೇವೆ. ಸಾಹೇಬ್ರು(ಡಿಕೆಶಿ) ಬರದೇ ಇದಿದ್ರೆ ನಿರಾಸೆಯಾಗ್ತಿತ್ತು. ೪೦೦ಕ್ಕೂ ಹೆಚ್ಚು ಜನ ಪಕ್ಷಕ್ಕೆ ಸೇರ್ತಿದ್ದೇವೆ. ಎಲ್ಲ ಸದ್ಯಸರೂ ಸೇರಿ ಪಕ್ಷಕ್ಕೆ ಬಂದಿದ್ದೇವೆ. ನಾನು ಏನನ್ನು ಕೇಳೋದಿಲ್ಲ ಬಯಸಿಲ್ಲ ಎಂದಿದ್ದಾರೆ.
ಅಧಿಕಾರ ಬಯಸಿ ಬಂದ್ರೆ ಇಲ್ಲಿ ಏನು ಸಿಗಲ್ಲ. ಬೀಜ ಬಿತ್ತಿದರೆ ಅದು ಫಲ ನೀಡುತ್ತದೆ. ಅದು ತಕ್ಷಣ ಫಲ ನೀಡುತ್ತದೆ ಅಂದ್ರೆ ಆಗಲ್ಲ. ಇದು ಸ್ವಾತಂತ್ರ್ಯ ಪೂರ್ವದಿಂದ ಇರುವ ಪಕ್ಷ. ಕಾಂಗ್ರೆಸ್ ಪಕ್ಷ ಕೋಮುವಾದಿಯ ಪಕ್ಷವಲ್ಲ. ಎಲ್ಲ ಪಕ್ಷವೂ ನೂರರಷ್ಟು ನ್ಯಾಯ ಒದಗಿಸಲ್ಲ. ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸೋ ಕೆಲಸ ಮಾಡ್ತಿದೆ. ನಾವು ಸರ್ಕಾರದ ಗ್ಯಾರಂಟಿ ಯೋಜನೆ. ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಸಾರಿ ಹೇಳ್ತೇವೆ. ಇದಕ್ಕೆ ಕಾರ್ಯಕರ್ತರು ತಯಾರಾಗಿರಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.



















