ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗುಂಡಿಗಳದ್ದು ದೊಡ್ಡ ತಲೆನೋವಾಗಿದೆ. ಗುಂಡಿಗಳಲ್ಲಿ ರಸ್ತೆ ಇದೆಯೋ? ಅಥವಾ ರಸ್ತೆಗಳಲ್ಲಿ ಗುಂಡಿಗಳಿವೆಯೋ? ಎಂಬುವುದೇ ಗೊತ್ತಾಗದ ಸ್ಥಿತಿ ಈಗ ನಿರ್ಮಾಣವಾಗಿದೆ. ಹೀಗಾಗಿ ಹಲವಾರು ಅವಾಂತರಗಳು ನಡೆಯುತ್ತಿರುತ್ತವೆ. ಈಗ ಗುಂಡಿಗಳಲ್ಲೇ ಸ್ಟಂಟ್ ಮಾಡಲು ಆಟೋರಾಜನೊಬ್ಬ ಪ್ರಯತ್ನಿಸಿರುವ ಘಟನೆ ನಡೆದಿದೆ.
ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸುವುದಕ್ಕಾಗಿ ಆಟೋ ಚಾಲಕನೊಬ್ಬ ರಸ್ತೆಯಲ್ಲೇ ಸ್ಟಂಟ್ ಮಾಡಿದ್ದಾನೆ. ದಾರಿ ಉದ್ದಕ್ಕೂ ಗುಂಡಿಗಳನ್ನು ತಪ್ಪಿಸಲು ಆಟೋ ಚಾಲಕ ಸ್ಟಂಟ್ ಮಾಡುತ್ತಾ ಹೋಗಿದ್ದಾನೆ. ಜೋರಾಗಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕಕ್ಕೆ ಹೋಗಿದೆ. ಹೀಗಾಗಿ ದೊಡ್ಡ ಅಪಘಾತವೊಂದು ಜಸ್ಟ್ ಮಿಸ್ ಆಗಿದೆ.
ಬನ್ನೇರುಘಟ್ಟದ ವೇಗಾ ಸಿಟಿ ಮಾಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಟೋ ರಾಜನ ಸ್ಟಂಟ್ ನೋಡಿ ಪ್ಯಾಸೆಂಜರ್ಸ್ ಹಾಗೂ ಹಿಂಬದಿ ಸವಾರರು ಗಾಬರಿಗೊಂಡಿದ್ದಾರೆ. ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.