ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಜೋರಾಗಿದ್ದು, ಮಳೆಗೆ ಆಟೋ ಚಾಲಕ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಳೆ ಆರ್ಭಟದಿಂದ ಚಿಕ್ಕಬೂದನೂರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ.
ನೀರಿನ ರಭಸಕ್ಕೆ ಆಟೋ ಕೊಚ್ಚಿಕೊಂಡು ಹೋಗಿದೆ. ನೀರಿನಲ್ಲಿ ಆಟೋ ತೇಲಿ ಹೋಗಿದ್ದರಿಂದ ಆಟೋಚಾಲಕನ ಹುಡುಕಾಟಕ್ಕೆ ಗ್ರಾಮದ ಜನರು ಮುಂದಾಗಿದ್ದಾರೆ. ಸದ್ಯ ಆಟೋದಲ್ಲಿ ಪ್ರಯಾಣಿಕರು ಸಹ ಇದ್ದಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ನಡೆದಿದೆ.