ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಕ್ರೀಡಾಂಗಣದಲ್ಲಿಯೇ ಪುಷ್ಪ ಚಿತ್ರದ ಸ್ಟೆಪ್ ಹಾಕಿ ಭಾರತೀಯ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಈಗ ಪುಷ-2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
‘ಪುಷ್ಪ ಬಗ್ಗದೇ ಇಲ್ಲ’ ಡೈಲಾಗ್ ಮೆಚ್ಚಿಕೊಂಡಿದ್ದ ಡೇವಿಡ್, ಈ ಡೈಲಾಗ್ ಮತ್ತು ಹಾಡಿನ ಡ್ಯಾನ್ಸ್ ಸ್ಟೆಪ್ಸ್ ನ್ನು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ನೋಡಿದ್ದ ನಟ ಅಲ್ಲು ಅರ್ಜುನ್, ‘ಪುಷ್ಪ 2’ ಚಿತ್ರದ ಹಾಡಿಗೆ ಅವರಿಂದ ಡ್ಯಾನ್ಸ್ ಮಾಡಿಸುತ್ತೇನೆ ಎಂದಿದ್ದರು. ಈ ಮಾತು ಈಗ ಸತ್ಯವಾಗಿದೆ ಎನ್ನಲಾಗುತ್ತಿದೆ.
ಚಿತ್ರೀಕರಣದಲ್ಲಿ ವಾರ್ನರ್ ಭಾಗಿಯಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹೀಗಾಗಿ ಅಭಿಮಾನಿಗಳು ‘ಪುಷ್ಪ 2’ ಚಿತ್ರದ ಚಿತ್ರೀಕರಣದಲ್ಲೇ ಕಾಣಿಸಿಕೊಂಡಿರಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ವೈರಲ್ ಫೋಟೋದಲ್ಲಿ ವಾರ್ನರ್, ಗನ್ ಹಿಡಿದು ಸಖತ್ ಸ್ಟೈಲಿಶ್ ಲುಕ್ನಲ್ಲಿ ನಡೆದುಕೊಂಡು ಬರುತ್ತಿರುವುದು ಕಂಡು ಬಂದಿದೆ.
‘ಪುಷ್ಪ 2’ ಚಿತ್ರದಲ್ಲಿ ಡೇವಿಡ್ ಅತಿಥಿ ಪಾತ್ರದಲ್ಲಿ ನಟಿಸಿರಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ, ಅಧಿಕೃತ ಮಾಹಿತಿ ಮಾಹಿತಿ ಚಿತ್ರತಂಡದಿಂದ ಕೇಳಿ ಬಂದಿಲ್ಲ. ಅಭಿಮಾನಿಗಳು ಮಾತ್ರ ಈ ವಿಷಯವಾಗಿ ಚರ್ಚೆ ಮಾಡುತ್ತಿದ್ದಾರೆ.