ಬೆಂಗಳೂರು: ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬಿಗ್ ಬ್ಯಾಶ್ ಲೀಗ್ (BBL) ಕುರಿತು ಪ್ರಕಟಣೆಯೊಂದು ಹೊರಡಿಸಿದ್ದಾರೆ. ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಯನ್ನು ಕೊನೆ ಮಾಡುವ ತನಕ ಈ ಲೀಗ್ನಲ್ಲಿ ಆಡುವುದಿಲ್ಲ ಎಂದು ಹೇಳಿಕೊಂಡಿದ್ದದಾರೆ. ಈ ಮೂಲಕ ಅವರು ನಿವೃತ್ತಿಯ ಬಗ್ಗೆ ಸ್ಪಷ್ಟ ನಿರ್ಧಾರ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡದೊಂದಿಗೆ ಸ್ಟಾರ್ಕ್ ಹೊಂದಿರುವ ಬದ್ಧತೆ ಅಪಾರ. ಇಂದಿನ ಕ್ರಿಕೆಟ್ ಯುಗದಲ್ಲಿ ಹಲವು ಆಟಗಾರರು ಲೀಗ್ಗಳಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಬಿಟ್ಟು ಬಿಡುತ್ತಾರೆ. ಆದರೆ ಸ್ಟಾರ್ಕ್ ಟಿ20 ಲೀಗ್ಗಳನ್ನ ತಪ್ಪಿಸಿಕೊಂಡು ಎಲ್ಲಾ ಮೂರು ಶೈಲಿಗಳಲ್ಲಿಯೂ ತಮ್ಮ ದೇಶದ ತಂಡದ ಪರ ಆಡಲು ಫಿಟ್ ಆಗಿರುತ್ತಾರೆ.
ಮಿಚೆಲ್ ಸ್ಟಾರ್ಕ್ ತಮ್ಮ ದೇಶದ ಪರ ಯಾವ ಪಂದ್ಯವನ್ನೂ ಕೈಬಿಡುವುದಿಲ್ಲ, ಇದನ್ನು 2024-25 ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿಯೂ ಅವರು ಸಾಬೀತುಪಡಿಸಿದ್ದಾರೆ. ಗಾಯಗೊಂಡಿದ್ದರೂ ಆಡಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.
ಅವರು ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಭಾಗವಹಿಸಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಅವರು ಉತ್ತಮವಾಗಿ ಬೌಲಿಂಗ್ ಮಾಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.
ದೇಶೀಯ ತಂಡಕ್ಕೆ ಅವರ ಸೇವೆ ಕಡ್ಡಾಯ
ತಮ್ಮನ್ನು ಯಾವಾಗಲೂ ಆಸ್ಟ್ರೇಲಿಯಾ ಪರ ಲಭ್ಯವಾಗುವಂತೆ ಮಾಡಲು ಕಳೆದ ದಶಕದವರೆಗೂ ಬಿಬಿಎಲ್ ಆಡಿಲರಿಲ್ಲ. ಅವರು ಈ ಲೀಗ್ನಲ್ಲಿ ಕೇವಲ 10 ಪಂದ್ಯಗಳನ್ನಷ್ಟೇ ಆಡಿದ್ದಾರೆ. 2014-15ರಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡಿದ ಪಂದ್ಯವೇ ಅವರ ಕೊನೇ ಪ್ರದರ್ಶನ.
ಬಿಬಿಎಲ್ನಲ್ಲಿ ಆಡಿದ 10 ಪಂದ್ಯಗಳಲ್ಲಿ, ಸ್ಟಾರ್ಕ್ 14 ಸರಾಸರಿಯೊಂದಿಗೆ 20 ವಿಕೆಟ್ ಪಡೆದಿದ್ದಾರೆ. ಆದರೆ ಆ ಬಳಿಕ ಅವರು ಬಿಬಿಎಲ್ನಲ್ಲಿ ಹಾಜರಾಗಿಲ್ಲ. ಅವರ ಈ ನಿರ್ಧಾರವನ್ನು ಪರಿಗಣಿಸಿ, ಬಿಬಿಎಲ್ಗೆ ಮರಳುವ ಕುರಿತಂತೆ ಹಲವಾರು ಚರ್ಚೆಗಳು ನಡೆಯುತ್ತಿವೆ.
ನಾನು ನಿವೃತ್ತಿಯಾದರೆ ನೋಡೋಣ: ಸ್ಟಾರ್ಕ್
ಇತರ ಆಸ್ಟ್ರೇಲಿಯಾ ಆಟಗಾರರು ಬಿಬಿಎಲ್ ಆಡುತ್ತಿದ್ದರೂ, ಸ್ಟಾರ್ಕ್ ಮಾತ್ರ ದೂರವಿದ್ದಾರೆ., ತಮ್ಮ ಭವಿಷ್ಯವನ್ನು ಕುರಿತು ಅವರಿಗೆ ನಿಖರವಾಗಿ ತಿಳಿದಿಲ್ಲ. ಆಸ್ಟ್ರೇಲಿಯಾ ತಂಡ ನಿರಂತರವಾಗಿ ಪಂದ್ಯಗಳನ್ನಾಡುತ್ತಿರುತ್ತದರಿಂದ, ಲೀಗ್ ಆಡಲು ಅವರ ಅವಕಾಶ ಕಡಿಮೆ ಎಂಬುದೇ ಅವರ ಅಭಿಪ್ರಾಯ.
ಪ್ರತೀ ವರ್ಷ ಕೇವಲ 10 ದಿನದಷ್ಟು ಮಾತ್ರ ಬಿಡುವು ದೊರಕುತ್ತದೆ. ಈ ವೇಳೆ ನಾನು ಆಡಲು ಸಾಧ್ಯವಾಗುವುದಿಲ್ಲ. ಆದರೆ ನಾನು ನಿವೃತ್ತಿಯಾದ ಬಳಿಕ ಬಿಬಿಎಲ್ ಬಗ್ಗೆ ನೋಡೋಣ ಎಂದು ಹೇಳಿದ್ದಾರೆ.
ಸಿಡ್ನಿ ತಂಡ ನನಗೆ ಇಷ್ಟ
ಸ್ಟಾರ್ಕ್ ತಮ್ಮ ಬಿಬಿಎಲ್ ಅನುಭವವನ್ನು ಕೊಂಡಾಡಿದ್ದಾರೆ. ಸಿಡ್ನಿ ಸಿಕ್ಸರ್ಸ್ ಪರ ಆಡಲು ತುಂಬಾ ಇಷ್ಟ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಬಿಟ್ಟುಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
*”ಕ್ರಿಕೆಟ್ ಆಡಿದಾಗ ಗಾಯಗೊಳ್ಳುವ ಅಪಾಯ ಇರುತ್ತದೆ. ಆದರೆ ನಾನು ಅತಿಯಾಗಿ ಭಯಪಟ್ಟು ಪಂದ್ಯಗಳನ್ನು ಕೈಬಿಡಲು ಇಚ್ಛಿಸಿಲ್ಲ. ನಾನು ಎಷ್ಟು ಸಾಧ್ಯವೋ ಅಷ್ಟು ಆಡುತ್ತೇನೆ. ಸಿಡ್ನಿ ಸಿಕ್ಸರ್ಸ್ ಜೊತೆಗೆ ಬಿಬಿಎಲ್ ಆಡಲು ನನಗೆ ತುಂಬಾ ಇಷ್ಟ.” ಎಂದು ಸ್ಟಾರ್ಕ್ ಹೇಳಿದ್ದಾರೆ.
ಸ್ಟಾರ್ಕ್ ಇತ್ತೀಚೆಗೆ 2024ರಲ್ಲಿ ಐಪಿಎಲ್ಗೆ ಮರಳಿದ್ದರು. ಹಲವಾರು ವರ್ಷಗಳ ಬಳಿಕ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿ ಟ್ರೋಫಿ ಗೆಲ್ಲಲು ಸಹಾಯ ಮಾಡಿದ್ದರು.