ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಪಾಕ್ ತಂಡ ಭರ್ಜರಿ ಜಯ ಸಾಧಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿದ್ದ ಪಾಕ್, ಈ ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಆಸ್ಟ್ರೇಲಿಯಾ ಕೇವಲ 35 ಓವರ್ ಗಳಲ್ಲಿ 163 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ್ ತಂಡ, 26.3 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪಾಕ್ ವೇಗಿಗಳಾದ ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಅಫ್ರಿದಿ ದಾಳಿಗೆ ತತ್ತರಿಸಿ ಹೋಯಿತು. ತಂಡದ ಪರ ಸ್ಟೀವ್ ಸ್ಮಿತ್ ಕಲೆಹಾಕಿದ 35 ರನ್ ಗಳೇ ಅತ್ಯಧಿಕ ಸ್ಕೋರ್ ಆಗಿತ್ತು. ತಂಡದ 8 ಆಟಗಾರರು 10 ಕ್ಕಿಂತ ಹೆಚ್ಚು ರನ್ ಕಲೆಹಾಕಿದರು. ಸ್ಮಿತ್ ಹೊರತುಪಡಿಸಿ ಉಳಿದವರೆಲ್ಲ ಕೇವಲ 20 ರನ್ ಗಳೊಳಗೆ ಪೆವಿಲಿಯನ್ ಹಾದಿ ಸೇರಿದರು.
ಬೌಲಿಂಗ್ ನಲ್ಲಿ ಹ್ಯಾರಿಸ್ ರೌಫ್ ಕಾಡಿದರೆ, ಬ್ಯಾಟಿಂಗ್ ನಲ್ಲಿ ಸ್ಯಾಮ್ ಅಯ್ಯೂಬ್ ಬ್ಯಾಟಿಂಗ್ ನಲ್ಲಿ ಆಸ್ಟ್ರೇಲಿಯಾದ ಬೌಲರ್ ಗಳನ್ನು ಕಾಡಿದರು. ಅಯ್ಯೂಬ್ ಕೇವಲ 71 ಎಸೆತಗಳಲ್ಲಿ 82 ರನ್ ಗಳಿಸಿದರು. ಅಲ್ಲದೇ, ಅಬ್ದುಲ್ಲಾ ಶಫೀಕ್ ಅವರೊಂದಿಗೆ 122 ಎಸೆತಗಳಲ್ಲಿ 137 ರನ್ ಜೊತೆಯಾಟ ನೀಡುವ ಮೂಲಕ ಅಮೋಘ ಜಯಕ್ಕೆ ಸಾಕ್ಷಿಯಿದರು.
ಅಬ್ದುಲ್ಲಾ ಶಫೀಕ್ ಕೂಡ ಭರ್ಜರಿ ಅರ್ಧಶತಕ ಬಾರಿಸಿದರು. ಶಫೀಕ್ 64 ರನ್ ಗಳಿಸಿ ಅಜೇಯರಾಗಿ ಉಳಿದರು, ಬಾಬರ್ ಅಜಮ್ ಕೂಡ 15 ರನ್ ಗಳಿಸಿ ಅಜೇಯರಾಗಿ ಉಳಿದರು.