ಟಿ20 ಕ್ರಿಕೆಟ್ ನಲ್ಲಿ ಕ್ರಿಕೆಟ್ ಕೂಸು ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ವಿಶ್ವ ದಾಖಲೆ ಬರೆದಿದೆ.
ಮೊದಲ 6 ಓವರ್ ಗಳಲ್ಲಿ ಅತ್ಯಧಿಕ ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವದಾಖಲೆ ಬರೆದಿದೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಈ ವಿಶ್ವ ದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ ಸ್ಫೋಟಕ ಆಟದಿಂದ ಈ ದಾಖಲೆ ಮೂಡಿದೆ.
ಮೊದಲ ಓವರ್ ನಲ್ಲೇ ಆಸ್ಟ್ರೇಲಿಯಾ ತಂಡವು ಜೇಕ್ ಫ್ರೇಸರ್ ಮೆಕ್ಗುರ್ಕ್ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಮಿಚೆಲ್ ಮಾರ್ಷ್ ಜೊತೆಗೂಡಿ ಟ್ರಾವಿಸ್ ಹೆಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸ್ಕಾಟ್ಲೆಂಡ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದ್ದಾರೆ.
ಈ ಮೂಲಕ ಮೊದಲ 6 ಓವರ್ ಗಳಲ್ಲಿ 113 ರನ್ ದಾಖಲಿಸಿ ವಿಶ್ವ ದಾಖಲೆ ಬರೆದರು. ನಂತರ 12 ಬೌಂಡರಿ, 5 ಸಿಕ್ಸರ್ ಗಳೊಂದಿಗೆ ಹೆಡ್ 80 ರನ್ ಗಳಿಸಿದ್ದಾರೆ. ಮಾರ್ಷ್ 5 ಬೌಂಡರಿ, ಮೂರು ಸಿಕ್ಸರ್ ಗಳೊಂದಿಗೆ 39 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. 2023 ರಲ್ಲಿ ಮೊದಲ 6 ಓವರ್ ಗಳಲ್ಲಿ 102 ರನ್ ಗಳಿಸಿತ್ತು. ಈಗ ಆಸ್ಟ್ರೇಲಿಯಾ ಈ ದಾಖಲೆ ಮುರಿದಿದೆ. ಅಲ್ಲದೇ, 155 ರನ್ ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡವು ಕೇವಲ 9.4 ಓವರ್ ಮುಟ್ಟಿದೆ.