ತುಮಕೂರು: ಸಾಲ ತೀರಿಸುವುದಕ್ಕೆ ಚಿಕ್ಕಮ್ಮಳೊಬ್ಬಳು ತನ್ನ ಮಗಳನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಆಂಧ್ರ ಪ್ರದೇಶದ (Andra Pradesh) ಹಿಂದೂಪುರದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ತಾಯಿ ಚೌಡಮ್ಮ ತುಮಕೂರು ನಗರದ ದಿಬ್ಬೂರದಲ್ಲಿ ಇದ್ದಾರೆ. ಚೌಡಮ್ಮ ತನ್ನ ಮಗಳನ್ನು ತಂಗಿ ಸುಜಾತಾ ವಾಸವಿದ್ದ ಹಿಂದೂಪುರದ ಮನೆಗೆ ಕಳುಹಿಸಿದ್ದಳು. ಹಿಂದೂಪುರ ಚೌಡಮ್ಮ ಮತ್ತು ಸುಜಾತಾರ ತವರು ಮನೆ. ಆದರೆ, ಸುಜಾತಾ ಹಿಂದೂಪುರದಲ್ಲಿ ಶೀರಾಮುಲು ಎಂಬ ವ್ಯಕ್ತಿ ಬಳಿ ಸಾಲ ಮಾಡಿದ್ದಳು. ಆದರೆ, ಸಾಲ ತೀರಿಸಲು ಆಗಿಲ್ಲ. ಹೀಗಾಗಿ ಚಿಕ್ಕಮ್ಮ ಸುಜಾತಾ ಬಾಲಕಿಯನ್ನು ಶ್ರೀರಾಮುಲುಗೆ 35 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ.
ನಂತರ ಶ್ರೀರಾಮುಲು ಬಾಲಕಿಯನ್ನು ಬಾತುಕೋಳಿ ಮೇಯಿಸಲು ಇರಿಸಿಕೊಂಡಿದ್ದನು. ಬಾಲಕಿ ಕರೆತರಲು ಚೌಡಮ್ಮ ಹಿಂದೂಪುರಕ್ಕೆ ಹೋದಾಗ ವಿಷಯ ತಿಳಿದಿದೆ. ಆನಂತರ ಚೌಡಮ್ಮ ತನ್ನ ಪುತ್ರಿಯನ್ನು ಕಳಿಸಿಕೊಡುವಂತೆ ಶ್ರೀರಾಮುಲು ಬಳಿ ಮನವಿ ಮಾಡಿಕೊಂಡಿದ್ದಾರೆ. ಆಗ ಶ್ರೀರಾಮುಲು ಹಣ ನೀಡಿ ಮರಳಿ ಕರೆದೊಯ್ಯುವಂತೆ ಹೇಳಿದ್ದಾರೆ. ಬಾಲಕಿಯ ತಾಯಿ ಚೌಡಮ್ಮ ತುಮಕೂರಿಗೆ ಬಂದು, ಮಗಳ ಸ್ಥಿತಿಯ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ತುಮಕೂರು ಪೊಲೀಸರು ಹಿಂದೂಪುರಕ್ಕೆ ಹೋಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.