ಕೋಲಾರ: ಕುಡಿಯಲು (Drinks) ಹಣ ನೀಡದ ಹಿನ್ನೆಲೆಯಲ್ಲಿ ಪಾಪಿಯೊಬ್ಬ ತನ್ನ ಚಿಕ್ಕಮ್ಮಗೆ (Aunt) ಬಿಯರ್ ಬಾಟಲ್ ನಿಂದ ಹೊಡೆದಿರುವ ಘಟನೆ ನಡೆದಿದೆ.
ಜಿಲ್ಲೆಯ (Kolar) ಬಂಗಾರಪೇಟೆ (Bangarpet) ತಾಲೂಕಿನ ದಾಸೇಗೌಡನೂರು ಹತ್ತಿರ ಈ ಘಟನೆ ನಡೆದಿದೆ. ಗರುಡ ಕೆಂಪನಹಳ್ಳಿ ಗ್ರಾಮದ ಅನಸೂಯ (35) ಹಲ್ಲೆಗೊಳಗಾಗಿರುವ ಮಹಿಳೆ. ಆನಂದ್ (26) ಹಲ್ಲೆ ಮಾಡಿರುವ ಯುವಕ.
ಈತ ಮಹಿಳೆಯನ್ನು ಕುಡಿಯಲು ಹಣ ಕೇಳಿದ್ದಾನೆ. ಆದರೆ, ಅವರು ನೀಡಿಲ್ಲ. ಇದರಿಂದ ಕೋಪಗೊಂಡು ಬಾಟಲಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಆನಂದನನ್ನು ಕಾಮಸಮುದ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.