ಬೆಂಗಳೂರು: ದೇಶದಲ್ಲಿನ್ನು ಸಾಲು ಸಾಲು ಹಬ್ಬಗಳು ಬರುತ್ತವೆ. ವರ ಮಹಾಲಕ್ಷ್ಮೀ ಹಬ್ಬದಿಂದಲೇ ಹಬ್ಬಗಳ ಸೀಸನ್ ಶುರುವಾಗಲಿದೆ. ಹಾಗಾಗಿ, ಶಾಲೆ-ಕಾಲೇಜುಗಳು, ಬ್ಯಾಂಕ್ ಸೇರಿ ವಿವಿಧ ಸರ್ಕಾರಿ, ಖಾಸಗಿ ನೌಕರರಿಗೆ ರಜೆ ಸಿಗುತ್ತವೆ. ಇನ್ನು ಆಗಸ್ಟ್ ತಿಂಗಳಲ್ಲಂತೂ ಕೃಷ್ಣ ಜನ್ಮಾಷ್ಟಮಿ, ರಕ್ಷಾಬಂಧನ, ಸ್ವಾತಂತ್ರ್ಯ ದಿನಾಚರಣೆ ಸೇರಿ ಹಲವು ರಜೆಗಳು ಸಿಗುತ್ತವೆ. ಇನ್ನು, ಆಗಸ್ಟ್ ನಲ್ಲಿ ಬ್ಯಾಂಕುಗಳಿಗೆ 16 ದಿನ ರಜೆ ಇರಲಿದೆ. ಯಾವ ದಿನ ಬ್ಯಾಂಕ್ ಕ್ಲೋಸ್ ಆಗಿರುತ್ತವೆ ಎಂಬುದರ ಪಟ್ಟಿ ಇಲ್ಲಿದೆ.
ಆಗಸ್ಟ್ 3: ಭಾನುವಾರದ ರಜೆ
ಆಗಸ್ಟ್ 8, ಶುಕ್ರವಾರ: ಟೆಂಡೋಂಗ್ ಲೋ ರುಮ್ ಫಾಟ್, ಝುಲನ್ ಪೂರ್ಣಿಮಾ (ಸಿಕ್ಕಿಂ ಮತ್ತು ಒಡಿಶಾದಲ್ಲಿ ರಜೆ)
ಆಗಸ್ಟ್ 9, ಶನಿವಾರ: ರಕ್ಷಾ ಬಂಧನ ಮತ್ತು ಎರಡನೇ ಶನಿವಾರದ ರಜೆ
ಆಗಸ್ಟ್ 10: ಭಾನುವಾರದ ರಜೆ
ಆಗಸ್ಟ್ 13, ಬುಧವಾರ: ದೇಶಪ್ರೇಮಿಗಳ ದಿನ (ಮಣಿಪುರದಲ್ಲಿ ರಜೆ)
ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ (ದೇಶಾದ್ಯಂತ ಸಾರ್ವತ್ರಿಕ ರಜೆ)
ಆಗಸ್ಟ್ 16, ಶನಿವಾರ: ಕೃಷ್ಣ ಜನ್ಮಾಷ್ಟಮಿ ರಜೆ
ಆಗಸ್ಟ್ 17: ಭಾನುವಾರದ ರಜೆ
ಆಗಸ್ಟ್ 19, ಮಂಗಳವಾರ: ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಜಯಂತಿ (ತ್ರಿಪುರಾ ರಾಜ್ಯದಲ್ಲಿ ರಜೆ)
ಆಗಸ್ಟ್ 23: ನಾಲ್ಕನೇ ಶನಿವಾರದ ರಜೆ
ಆಗಸ್ಟ್ 24: ಭಾನುವಾರದ ರಜೆ
ಆಗಸ್ಟ್ 25, ಸೋಮವಾರ: ಶ್ರೀಮಂತ ಶಂಕರದೇವರ ತಿರುಭಾವ ತಿಥಿ (ಅಸ್ಸಾಂನಲ್ಲಿ ರಜೆ)
ಆಗಸ್ಟ್ 26, ಮಂಗಳವಾರ: ಹರ್ತಾಲಿಕಾ ತೀಜ್ (ಛತ್ತೀಸ್ ಗಡ, ಸಿಕ್ಕಿಂನಲ್ಲಿ ರಜೆ)
ಆಗಸ್ಟ್ 27, ಬುಧವಾರ: ಗಣೇಶ ಚತುರ್ಥಿ ರಜೆ
ಆಗಸ್ಟ್ 28, ಗುರುವಾರ: ನುವಾಖೈ (ಒಡಿಶಾ, ಗೋವಾದಲ್ಲಿ ರಜೆ)
ಆಗಸ್ಟ್ 31: ಭಾನುವಾರದ ರಜೆ