ಬೆಂಗಳೂರು: ರಾಜ್ಯ ರಾಜಧಾನಿ ದೆಹಲಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 71 ಹುದ್ದೆಗಳ ನೇಮಕಾತಿಗಾಗಿ (AUD Recruitment 2026) ಅಧಿಸೂಚನೆ ಹೊರಡಿಸಲಾಗಿದೆ. ಪ್ರೊಫೆಸರ್ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹಲವು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತರಿಂದ ಆಫ್ ಲೈನ್ ಮತ್ತು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆಯ ಹೆಸರು: ಅಂಬೇಡ್ಕರ್ ವಿಶ್ವವಿದ್ಯಾಲಯ, ದೆಹಲಿ
ಖಾಲಿ ಹುದ್ದೆಗಳ ಸಂಖ್ಯೆ: 71
ಹುದ್ದೆಯ ಸ್ಥಳ: ನವದೆಹಲಿ
ಹುದ್ದೆಯ ಹೆಸರು: ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಇತ್ಯಾದಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜನವರಿ 9 (ಆಫ್ ಲೈನ್- ಜನವರಿ 16)
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕೆಲ ಹುದ್ದೆಗಳಿಗೆ 5-10 ವರ್ಷಗಳ ಕಾರ್ಯಾನುಭವ ಮುಖ್ಯವಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 2.10 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ. ಒಬಿಸಿ, ಇಡಬ್ಲ್ಯೂಎಸ್ ನವರಿಗೆ 1 ಸಾವಿರ ರೂ. ಅರ್ಜಿ ಶುಲ್ಕವಿದೆ. ಉಳಿದವರಿಗೆ ವಿನಾಯಿತಿ ನೀಡಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು aud.delhi.gov.in ಗೆ ಭೇಟಿ ನೀಡಬಹುದು.
ಯಾವ ಹುದ್ದೆ ಎಷ್ಟು ಖಾಲಿ?
ಪ್ರೊಫೆಸರ್ 20
ಅಸಿಸ್ಟಂಟ್ ಪ್ರೊಫೆಸರ್ 24
ಅಸೋಸಿಯೇಟ್ ಪ್ರೊಫೆಸರ್ 23
ಇತರ ಸಿಬ್ಬಂದಿ 04
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವಿಳಾಸ
Deputy Registrar (Recruitment & Promotion Cell), Room No. 31A, Dr. B. R. Ambedkar University Delhi, Lothian Road, Kashmere Gate Campus, Delhi – 110006
ಇದನ್ನೂ ಓದಿ; ಗೂಗಲ್ ಕಂಪನಿಯಲ್ಲಿ ವೃತ್ತಿ ಆರಂಭಿಸಬೇಕಾ? ಹಾಗಾದರೆ ಇಲ್ಲಿದೆ ಗೋಲ್ಡನ್ ಚಾನ್ಸ್



















