ಸಿಗ್ನಲ್ ನಲ್ಲಿ ಬಸ್ ಅಡ್ಡಗಟ್ಟಿದ ಯುವತಿ ಮೇಲೆ ಡ್ರೈವರ್ ಬಸ್ ನುಗ್ಗಿಸಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಎಂಟಿಸಿ ಬಸ್ ಪಕ್ಕ ಕಾರಿನಲ್ಲಿದ್ದ ಯುವತಿ ಕಾರಿನಿಂದ ಇಳಿದು ಬಸ್ ಚಾಲಕನನ್ನು ಪ್ರಶ್ನೆ ಮಾಡಿದ್ದಾಳೆ. ಆದರೆ, ಯಾವ ವಿಚಾರಕ್ಕೆ ಪ್ರಶ್ನೆ ಮಾಡಲು ಮುಂದಾದರು? ಈ ಘಟನೆಗೂ ಮುಂಚೆ ಯುವತಿ ಮತ್ತು ಬಸ್ ಡ್ರೈವರ್ ನಡುವೆ ಏನಾಗಿತ್ತು? ಎಂಬುವುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಯುವತಿ ಪ್ರಶ್ನೆ ಮಾಡಲು ಮುಂದಾಗುತ್ತಿದ್ದಂತೆ ಯುವತಿ ಮೇಲೆ ಬಸ್ ಹತ್ತಿಸಲು ಬಸ್ ಡ್ರೈವರ್ ಮುಂದಾಗಿದ್ದಾನೆ.
ಕೂದಲೆಳೆ ಅಂತರದಲ್ಲಿ ಯುವತಿ ಪಾರಾಗಿದ್ದಾಳೆ. ಸದ್ಯ ಈ ಘಟನೆ ಬೆಂಗಳೂರಿನ ಯಾವ ಪ್ರದೇಶದಲ್ಲಿ ನಡೆದಿದೆ ಎನ್ನುವುದರ ಬಗ್ಗೆ ಸ್ಪಷತೆ ಇಲ್ಲ. ಮೇ 23ನೇ ತಾರೀಖು ಸಂಜೆ 5.40ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕಂಡು ಈಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.