ಬೆಳಗಾವಿ ಜಿಲ್ಲೆಯ ಇಂಗಳಿ ಗ್ರಾಮದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣ ನನ್ನ ಗಮನಕ್ಕೆ ಇದೆ. ಎಲ್ಲ ಪೊಲೀಸ್ ಅಧಿಕಾರಿಗಳು ಗೋಕಾಕ ಜಾತ್ರೆಯಲ್ಲಿ ಬ್ಯೂಸಿ ಇದ್ದರು. ಪಿಎಸ್‌ಐ ನಿಖೀಲ್ ಕಾಂಬಳೆ ಅಮಾನತ್ತು ಕುರಿತು ಅಧಿಕಾರಿಗಳ ಜೊತೆ ಮಾತಾನಾಡುತ್ತೇನೆ. ಎರಡು ದಿನಗಳಲ್ಲಿ ಮಾತನಾಡಿ ಎಲ್ಲವನ್ನೂ ಸರಿಪಡಿಸುತ್ತೇನೆ. ಆತಂಕ ಪಡುವ ಅವಶ್ಯಕತೆ ಇಲ್ಲ, ದಲಿತ ಅಧಿಕಾರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹುಕ್ಕೇರಿಯಲ್ಲಿ ಸತೀಶ್ ಹೇಳಿದ್ದಾರೆ.