ಬೆಳಗಾವಿ: ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಹೋಗಿದ್ದ ಲೈನ್ ಮನ್ ಗಳ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ದುಪಧಾಳ ಗ್ರಾಮದಲ್ಲಿ ನಡೆದಿದೆ. ಲೈನ್ ಮನ್ ಗಳನ್ನು ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ವ್ಯಕ್ತಿಯೊಬ್ಬರ ಮನೆಯ ವಿದ್ಯುತ್ ಬಿಲ್ 17,146 ರೂ. ಬಾಕಿ ಇತ್ತು. ಹೀಗಾಗಿ ವಸೂಲಿಗೆಂದು ಲೈನ್ ಮನ್ ಪ್ರಮೋದ ಮಾಳಗಿ ತೆರಳಿದ್ದರು. ಆದರೆ, ಖಾದಿರಸಾಬ ಪಠಾಣ ಎಂಬ ಗ್ರಾಹಕ ಬಿಲ್ ಪಾವತಿಸಲು ನಿರಾಕರಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆಗ ಲೈನ್‌ಮನ್ ಮೇಲೆ ಹಲ್ಲೆ ಗ್ರಾಹಕ ನಡೆಸಿದ್ದಾರೆ ಎನ್ನಲಾಗಿದೆ. ಗೋಕಾಕ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲೈನ್‌ಮನ್ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.