ನವದೆಹಲಿ: ದೆಹಲಿ ಸಿಎಂ ಅತಿಶಿ ಇಂದು ಅಧಿಕಾರ ವಹಿಸಿಕೊಂಡಿದ್ದು, ಕೇಜ್ರಿವಾಲ್ ಅವರ ಕುರ್ಚಿಯಲ್ಲಿ ಕುಳಿತುಕೊಂಡಿಲ್ಲ. ಇದು ಹಲವಾರು ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಕಚೇರಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕುರ್ಚಿ ಪಕ್ಕದಲ್ಲಿ ಬೇರೊಂದು ಕುರ್ಚಿ ತರಿಸಿಕೊಂಡು ಅತಿಶಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಮಾಯಣದ ಕತೆ ಹೇಳಿದ್ದಾರೆ. ರಾಮನಿಗಾಗಿ ಭರತ ಕುರ್ಚಿ ಖಾಲಿ ಇಟ್ಟಿದ್ದರು. ಅವರ ಪಾದುಕೆ ಇಟ್ಟು ಅಧಿಕಾರ ನಡೆಸಿದ್ದರು. ಹೀಗಾಗಿ ನಾನು ಕೂಡ ಕೇಜ್ರಿವಾಲ್ ಅವರ ಕುರ್ಚಿಯನ್ನು ಖಾಲಿ ಇಟ್ಟಿದ್ದೇನೆ. ಮುಂದಿನ ಚುನಾವಣೆಯಲ್ಲಿಯೂ ಜನ ಅವರನ್ನೇ ಆಯ್ಕೆ ಮಾಡುತ್ತಾರೆ. ಆಗ ಅವರು ಮತ್ತೆ ಇದೇ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಅತಿಶಿ ತನ್ನ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಡೆಗೆ ಸಾಂಕೇತಿಕ ಸೂಚಕದಲ್ಲಿ ತನ್ನ ಪಕ್ಕದಲ್ಲಿ ಅವರು ಕೂರುತ್ತಿದ್ದ ಖಾಲಿ ಕುರ್ಚಿಯನ್ನು ಇರಿಸಿದ್ದಾರೆ. “ಈ ಕುರ್ಚಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೇರಿದ್ದು, ದೆಹಲಿಯ ಜನರು 4 ತಿಂಗಳ ನಂತರ ಅವರನ್ನು ಪುನಃ ಸ್ಥಾಪಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಅತಿಶಿ ಸ್ವತಃ ಶಿಕ್ಷಣ, ಹಣಕಾಸು, ವಿದ್ಯುತ್, ಮತ್ತು PWDಯಂತಹ ನಿರ್ಣಾಯಕ ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ಸಿಎಂ ಆಗಿ ಬಡ್ತಿ ಪಡೆದಿದ್ದಾರೆ. ಅತಿಶಿ ಅವರು ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ನಂತರ ಸಿಎಂ ಆದ ದೇಶದ 17ನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಅತಿಶಿ ಅವರು ಶನಿವಾರ ತಮ್ಮ ಹೊಸ ಮಂತ್ರಿ ಮಂಡಳಿಯೊಂದಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.