ಬೆಂಗಳೂರು: ಅಟಲ್ ಜೀ ಸಂಘಟನೆ, ಹೋರಾಟ ಇವೆಲ್ಲವೂ ಇವತ್ತಿನ ಕಾರ್ಯಕರ್ತರಿಗೆ ಪ್ರೇರಣಾಶಕ್ತಿಯಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B S Yediyurappa) ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರ 100ನೇ ಜನ್ಮದಿನದ ಸಂದರ್ಭದಲ್ಲಿ ಅವರ ವಿಚಾರಧಾರೆಗಳನ್ನು ನಮ್ಮ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕು. ವಾಜಪೇಯಿ ಅವರು ನಮ್ಮ ಪಕ್ಷದ ಮಹಾನ್ ನಾಯಕರು. ಅವರು ರಾಜ್ಯಕ್ಕೆ ಬಂದಾಗಲೆಲ್ಲ ನಾನು ಅವರೊಂದಿಗೆ ಹಲವು ಬಾರಿ ಪ್ರವಾಸ ಮಾಡಿ ಪಕ್ಷ ಕಟ್ಟಿದ್ದೇನೆ. ಅವರ ಮಾರ್ಗದರ್ಶನ ನಮ್ಮ ಪಕ್ಷಕ್ಕೆ ತುಂಬಾ ಇದೆ ಎಂದು ಹೇಳಿದ್ದಾರೆ.
ಈ ವೇಳೆ ವಿಪ ಸದಸ್ಯ ಸಿ.ಟಿ.ರವಿ, ಅಟಲ್ ಜೀ ಶತಮಾನೋತ್ಸವ ಅಭಿಯಾನದ ರಾಜ್ಯ ಪ್ರಮುಖ ಡಾ.ಶಿವಯೋಗಿ ಸ್ವಾಮಿ, ರಾಜ್ಯ ಸಂಚಾಲಕ ಜಗದೀಶ ಹಿರೇಮನಿ, ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ರಾಜ್ಯ ಸಮಿತಿ ಸದಸ್ಯ ಸದಾಶಿವ, ಮಮತಾ ಉದಯ್ ಸೇರಿದಂತೆ ಹಲವರು ಇದ್ದರು.