ಬೆಂಗಳೂರು : ಭಾರತೀಯ ಆಕಾಶ ವೀಕ್ಷಕರಿಗೆ ಅಪರೂಪದ ಖಗೋಳ ವಿಸ್ಮಯ ಎದುರಾಯಿತು. ಸೆಪ್ಟೆಂಬರ್ 7 ಮತ್ತು 8, 2025ರಂದು ದೇಶಾದ್ಯಂತ ಸಂಪೂರ್ಣ ಚಂದ್ರಗ್ರಹಣ ವೀಕ್ಷಣೆಗೆ ಲಭ್ಯವಾಯಿತು.
ಈ ಸಂದರ್ಭದಲ್ಲಿ ಚಂದ್ರನು ಕೆಂಪು-ಕಿತ್ತಳೆ ಬಣ್ಣಕ್ಕೆ ತಿರುಗುವ ಕಾರಣದಿಂದ ಇದನ್ನು “ರಕ್ತ ಚಂದ್ರ” ಎಂದು ಕರೆಯಲಾಗುತ್ತದೆ.
ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳ ಆಕಾಶದಲ್ಲಿ ಈ ಅಪೂರ್ವ ಗ್ರಹಣವು ಸ್ಪಷ್ಟವಾಗಿ ಗೋಚರಿಸಿತು. ಅಲ್ಲದೆ, ಏಷ್ಯಾ, ಪಶ್ಚಿಮ ಆಸ್ಟ್ರೇಲಿಯಾ ಹಾಗೂ ಯುರೋಪಿನ ಅನೇಕ ಭಾಗಗಳಲ್ಲಿಯೂ ಈ ಅದ್ಭುತ ಚಂದ್ರಗ್ರಹಣ ವೀಕ್ಷಿಸಲು ಅವಕಾಶ ಸಿಕ್ಕಿತು.
ಸಂಪೂರ್ಣ ಚಂದ್ರಗ್ರಹಣದ ವೇಳೆ ಚಂದ್ರನು ಭೂಮಿಯ ನೆರಳಿನಲ್ಲಿ ಸಂಪೂರ್ಣ ಮುಳುಗುತ್ತಾನೆ. ಈ ಸಂದರ್ಭದಲ್ಲಿ ಭೂಮಿಯ ವಾತಾವರಣವು ಸೂರ್ಯನ ಬೆಳಕನ್ನು ತಿರುಗಿಸಿ ಚಂದ್ರನ ಮೇಲ್ಮ ಮೇಲೆ ಬೀಳಿಸುತ್ತದೆ. ನೀಲಿ ಬೆಳಕಿನ ತರಂಗ ದೈರ್ತ್ಯವು ವಾತಾವರಣದಲ್ಲಿ ಹೆಚ್ಚು ಚದರಲ್ಪಡುವುದರಿಂದ, ಚಂದ್ರನು ಕೆಂಪು-ಕಿತ್ತಳೆ ಬಣ್ಣದಲ್ಲಿ ಹೊಳೆಯುವಂತೆ ಕಾಣುತ್ತದೆ.
ತಜ್ಞರ ಪ್ರಕಾರ, ಈ ಬಾರಿ ಗ್ರಹಣವು ಚಂದ್ರನಿಂದ, ಭೂಮಿಗೆ ಅತೀ ಹತ್ತಿರದ ಬಿಂದುವಿಗೆ ಕೇವಲ 2.7 ದಿನಗಳ ಮೊದಲು ಸಂಭವಿಸುತ್ತಿರುವುದರಿಂದ, ಚಂದ್ರ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿ ಗೋಚರಿಸಿತು.