ಬೆಂಗಳೂರು : ಗ್ರಾಹಕರಿಗೆ ಸೇರಿದ ಬರೋಬ್ಬರಿ 2 ಕೆ.ಜಿ.787 ಗ್ರಾಂ. ಚಿನ್ನವನ್ನು ಬ್ಯಾಂಕ್ ಸಿಬ್ಬಂದಿಯೇ ಕದ್ದಿರುವ ಘಟನೆ ನಗರದ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ.
ಇಂಡಿಯನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್ ಎಂಬಾತ ಆನ್‌ಲೈನ್ ಜೂಜಿನ ಚಟದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಬ್ಯಾಂಕ್ ನಲ್ಲಿ ಗ್ರಾಹಕರ ಅಡಮಾವ ಇಡುವ ಚಿನ್ನದ ಲಾಕರ್ ಕೀ ಮ್ಯಾನೇಜರ್ ಹಾಗೂ ಅಸಿಸೆಂಟ್ ಮ್ಯಾನೇಜರ್ ಬಳಿ ಹತ್ತಿರ ಇರುತಿತ್ತು. ಮ್ಯಾನೇಜರ್ ಇಲ್ಲದ ವೇಳೆ ಒಂದೊಂದು ಚಿನ್ನದ ಪ್ಯಾಕೇಟ್ ನಿಂದ ಸ್ವಲ್ಪ ಸ್ವಲ್ಪ ಚಿನ್ನ ಎತ್ತಿದ್ದ ಆರೋಪಿ, ಯಾರಿಗೂ ಗೊತ್ತಾಗದಂತೆ ಚಿನ್ನ ಎಗರಿಸಿದ್ದಾನೆ.
ಗ್ರಾಹಕರೊಬ್ಬರು ಚಿನ್ನಾ ಬಿಡಿಸಿಕೊಳ್ಳಲು ಬಂದಿದ್ದರು. ಆಗ ಮ್ಯಾನೇಜರ್ ನೋಡಿದಾಗ ಚಿನ್ನಾಭರಣ ಕಾಣೆಯಾಗಿತ್ತು. ಕೂಡಲೇ ಮ್ಯಾನೇಜರ್ ಇತರೇ ಆಭರಣ ಪ್ಯಾಕೇಟ್ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕದ್ದ ಚಿನ್ನಾಭರಣವನ್ನು ಆರೋಪಿ ಕತ್ರಗುಪ್ಪೆ ಮಣಪುರಂ ಫೈನಾನ್ಸ್ ಹಾಗೂ ಮುತ್ತೂಟ್ ಮಿನಿ ಫೈನಾನ್ಸ್, ಮೂತ್ತೂಟ್ ಪಿನ್ ಕಾರ್ಪ್ ನಲ್ಲಿ ಅಡಮಾನ ಇಟ್ಟು ಹಣ ಪಡೆದಿದ್ದ. ಬಂದ ಹಣದಲ್ಲಿ ಆನ್ ಲೈನ್ ಬೆಟ್ಟಿಂಗ್, ಜೂಜಾಟ ಮಾಡಿ ಹಣ ಕಳೆದಿದ್ದ.
ಕದ್ದ ಮಾಲು ವಶಕ್ಕೆ ಪಡೆಯಲು ಹೋದ ಪೊಲೀಸರಿಗೆ ಮುತ್ತೂಟ್ ಫೈನಾನ್ಸ್ ಚಿನ್ನಾಭರಣವನ್ನು ವಾಪಾಸ್ ನೀಡಿದ್ದಾರೆ. ಫೈನಾನ್ಸ್ ನವರು ಕಳವು ಮಾಲು ಸ್ವೀಕರಿಸೋದು ಅಪರಾಧ ಅಂತ ಗೊತ್ತಿದ್ರು ಸ್ವೀಕಾರ ಮಾಡುತ್ತಾ ಇದ್ದಾರೆ. ಈ ಬಗ್ಗೆ ಹೈ ಕೋರ್ಟ್ ನಲ್ಲಿ ದಾವೆ ಪೊಲೀಸರು ಹುಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಕಿರಣ್ ಕುಮಾರ್‌ನನ್ನು ಅರೆಸ್ಟ್ ಮಾಡಿ 700 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ : ಚುನಾವಣಾ ಅಕ್ರಮ ಆರೋಪ | ಶಾಸಕ ಯತ್ನಾಳ್ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!



















