ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಡೆದಿದೆ.ASI ಗೆ ಬೈಕ್ ನಿಂದ ಗುದ್ದಿ ಪರಾರಿಯಾಗಿದ್ದ ಗಾಂಜಾ ಕೇಸ್ ಆರೋಪಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಗಾಂಜಾ ಕೇಸ್ ಆರೋಪಿಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಹೀಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಗಾಂಜಾ ಕಿಂಗ್ ಪಿನ್ ಕಮ್ರಾನ್ ಹಲ್ಲೆ ನಡೆಸಿ, ಗುಂಡು ತಿಂದವ ಎನ್ನಲಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಗ್ರಾಮಾಂತರ ಠಾಣೆ PI ಮುದ್ದುರಾಜ್ ನಗರದ PNC ಗ್ರೌಂಡ್ ಬಳಿ ಆರೋಪಿ ಕಮ್ರಾನ್ ಕಾಲಿಗೆ ಶೂಟ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಘಟನೆಯಲ್ಲಿ ಪೇದೆ ತಿಮ್ಮರಾಯಪ್ಪಗೆ ಕೈಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ CEN ಠಾಣೆ ASI ದಿವಾಕರ್ ಗೆ ಬೈಕ್ ಗುದ್ದಿಸಿ ಆರೋಪಿ ಪರಾರಿಯಾಗಿದ್ದ.