ಹಾಸನ | ಮಹಿಳೆಯೊಬ್ಬರು ನೆರವಿಗಾಗಿ ಕರೆ ಮಾಡಿದ ವೇಳೆ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆ ASI ದೇವರಾಜ್ ದರ್ಪ ತೋರಿ, ಅವಾಚ್ಯ ಶಬ್ದಗಳಿಂದ ನಿಂಧಿಸಿದ ಘಟನೆಯನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದ್ದು, ಪ್ರಕರಣದ ನಿಯಮಾನುಸಾರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ವರದಿ ನೀಡುವಂತೆ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (SP) ಪತ್ರದ ಮೂಲಕ ಸೂಚಿಸಿದೆ.

ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆಗೆ ನೊಂದ ಮಹಿಳೆಯೊಬ್ಬರು, ಪತಿಯ ಮನೆಯವರಿಂದ ಉಂಟಾಗಿರುವ ದೌರ್ಜನ್ಯದ ಕುರಿತು ಸೂಕ್ತ ರಕ್ಷಣೆ ಒದಗಿಸುವಂತೆ ಮಹಿಳೆಯೊಬ್ಬರು 112 ಸಹಾಯವಾಣಿಗೆ ಕರೆ ಮಾಡಿದ್ದು, ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಎಸ್ಐ ದೇವರಾಜ್ ನೊಂದ ಮಹಿಳೆಗೆ ಸಾಂತ್ವನ ಹೇಳದೆ ಹಾಗೂ ಧೈರ್ಯ ತುಂಬದೆ ಮತ್ತು ರಕ್ಷಣೆ ಒದಗಿಸದೆ, ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂಧಿಸಿ, ದರ್ಪ ತೋರಿರುವ ಬಗ್ಗೆ ಮಾಧ್ಯಮಗಳಲ್ಲಿ ವಿಡಿಯೋ ವರದಿಯಾಗಿರುತ್ತದೆ.
ಆದ್ದರಿಂದ ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಸೂಚಿಸಿದ್ದಾರೆ.
ಇದನ್ನೂ ಓದಿ : ಬೆಳ್ತಂಗಡಿ | ಸಿನಿಮೀಯ ರೀತಿಯಲ್ಲಿ ಅಪ್ರಾಪ್ತೆಯ ಕಿಡ್ನಾಪ್ಗೆ ಯತ್ನ.. ಹಲ್ಲೆ ಮಾಡಿ ಕಿಡಿಗೇಡಿಗಳು ಎಸ್ಕೇಪ್!



















