ಉಡುಪಿ ಜಿಲ್ಲೆಯ ಕಾಪುವಿನ ಹೊಸ ಮಾರಿಗುಡಿಗೆ ಅಶ್ವಿನಿ ಪುನಿತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಮಗಳು ವಂದಿತಾಳೊಂದಿಗೆ ಕಾಪು ಮಾರಿಯಮ್ಮನ ದರ್ಶನ ಪಡೆದ ಅಶ್ವಿನಿ ಪುನಿತ್ ರಾಜ್ ಕುಮಾರ್, ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ಕಾಪು ಹೊಸ ಮಾರಿಗುಡಿಗೆ ಅಶ್ವಿನಿ ಪುನಿತ್ ರಾಜ್ ಕುಮಾರ್ ಭೇಟಿ ನೀಡಿದ್ದರು. ಒಂಬತ್ತು ದಿನ ನವದುರ್ಗಾ ಲೇಖನ ಬರೆದು ದೇವಿಗೆ ಸಮರ್ಪಿಸಿದ್ದರು. ಈಗ ಮತ್ತೊಮ್ಮೆ ಮಗಳೊಂದಿಗೆ ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ.


















