ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವು ದೀಪಾವಳಿ ಹಬ್ಬದ ದಿನ ಅಶ್ವಿನಿ ಪುನಿತ್ ರಾಜ್ ಕುಮಾರ್ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಯೋಗಕ್ಷೇಮ ವಿಚಾರಿಸಿ ಸಿಹಿ ಹಂಚಿಕೆ ಮಾಡಿದ್ದಾರೆ.
ವಿದ್ಯಾರಣ್ಯಪುರದ ಕ್ಯಾನ್ಸ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು, ಆಸ್ಪತ್ರೆಯಲ್ಲಿರುವ ಅಪ್ಪು ವಾರ್ಡ್ ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಕಳೆದ ಮೂರು ವರ್ಷದ ಹಿಂದೆ ಪುನಿತ್ ಹೆಸರಿನಲ್ಲಿ ಶುರುವಾದ ವಾರ್ಡ್ ಇದಾಗಿದೆ. ಈ ವೇಳೆ ಕ್ಯಾನ್ಸ್ ಆಸ್ಪತ್ರೆಯ ಎಂಡಿ ಡಾ.ನಿರಂತರ ಗಣೇಶ್ ಉಪಸ್ಥಿತರಿದ್ದರು.