ಅಪ್ಪು ಕಪ್ ಸೀಸನ್-3 ಗೆ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ ನೀಡಿದ್ದಾರೆ.

ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಜುಲೈನಲ್ಲಿ ” ಅಪ್ಪು ಕಪ್ ಸೀಸನ್ 3″ ಲೀಗ್ ಪಂದ್ಯಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ “ಅಪ್ಪು ಕಪ್ ಸೀಸನ್ 3” ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ನಡೆಯಿತು.

ಅಶ್ವಿನಿ ಪುನೀತ್ ರಾಜಕುಮಾರ್, ವಿಧಾನ ಪರಿಷತ್ ಸದಸ್ಯ ಸರವಣ, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು, ಶಾಸಕ ರಾಜು ಗೌಡ, ಸ್ಟಾರ್ ರಾಯಭಾರಿಗಳಾದ ಪ್ರಿಯಾಂಕ ಉಪೇಂದ್ರ, ಅನಿರುದ್ಧ ಜಟ್ಕರ್, ಸೃಜನ್ ಲೋಕೇಶ್, ರಾಜವರ್ಧನ್, ರಾಗಿಣಿ ದ್ವಿವೇದಿ ಸೇರಿದಂತೆ ಹಲವರು ಇದ್ದರು.

ಕಳೆದೆರೆಡು ಸೀಸನ್ ಗಳಿಂದ ಅಶ್ವಿನಿ ಪುನೀತ್ ರಾಜಕುಮಾರ್ ನಮ್ಮ ಜೊತೆಗೆ ಇದ್ದಾರೆ. ಅವರಿಗೆ ಹಾಗೂ ಸರವಣ ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ. ಈ ಬಾರಿಯ “ಅಪ್ಪು ಕಪ್” ನ ವಿಶೇಷವೆಂದರೆ ಜುಲೈ 25, 26 ,27 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ 16, 17 ರಂದು ಗೋವಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು ಹತ್ತು ತಂಡಗಳಿರುತ್ತವೆ. ಅದರಲ್ಲಿ ನಾಲ್ಕು ತಂಡಗಳು ಫೈನಲ್ ಪ್ರವೇಶಿಸಲಿವೆಂ ಎಂದು ಆಯೋಜಕ ಚೇತನ್ ಸೂರ್ಯ ಹೇಳಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮರ್ “ಅಪ್ಪು ಕಪ್” ಯಶಸ್ವಿಯಾಗಲೆಂದು ಹಾರೈಸಿದರು. ಸದಾ ನಾನು ಚೇತನ್ ಅವರ ಜೊತೆಗೆ ಇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕ ಸರವಣ ಹೇಳಿದರು.

ಅಪ್ಪು ಕಪ್ ಸೀಸನ್ 3 ರಲ್ಲಿ ಭಾಗವಹಿಸುತ್ತಿರುವ ತಂಡಗಳು
1) “ವೀರ ಕನ್ನಡಿಗ ಬುಲ್ಸ್” ಮಾಲೀಕ- ಮೊನೀಶ್ ಸಿ, ನಾಯಕ ದಿಲೀಪ್ ರಾಜ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್.
2) ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕ- ಪರಿತೋಷ್ ಮೂರ್ತಿ, ನಾಯಕ ದಿಗಂತ್, ಸ್ಟಾರ್ ರಾಯಭಾರಿ ಅವಿನಾಶ್ ದಿವಾಕರ್ .
3) “ಜಾಕಿ ರೈಡರ್ಸ್” ಮಾಲೀಕರು- ಶ್ರೀಹರ್ಷ, ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಪ್ರಿಯಾಂಕ ಉಪೇಂದ್ರ.
4) “ಮೌರ್ಯ ಸ್ಟ್ರೈಕರ್ಸ್” ಮಾಲೀಕರು- ವಿಜೇತ್, ನಾಯಕ ಪ್ರಮೋದ್ ಶೆಟ್ಟಿ, ಸ್ಟಾರ್ ರಾಯಭಾರಿ ರಾಜವರ್ಧನ್.
5)”ಯುವರತ್ನ ಚಾಂಪಿಯನ್ಸ್ ” ಮಾಲೀಕರು- ದಿವ್ಯ ರಂಗೇನಹಳ್ಳಿ, ನಾಯಕ ಇಂದ್ರಜಿತ್ ಲಂಕೇಶ್, ಸ್ಟಾರ್ ರಾಯಭಾರಿ ಧನ್ಯ ರಾಮಕುಮಾರ್.
6) ಪವರ್ ಪೈತಾನ್ಸ್, ಮಾಲೀಕರು- ರೂಪ, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಸಿಂಧೂ ಲೋಕನಾಥ್.
7)ಗಂಧದಗುಡಿ ವಾರಿಯರ್ಸ್ ಮಾಲೀಕರು- ಸತೀಶ್ ಎಂ, ನಾಯಕ ಹರೀಶ್ ನಾಗರಾಜ್, ಸ್ಟಾರ್ ರಾಯಭಾರಿ ವಿಕ್ರಮ್ ರವಿಚಂದ್ರನ್.
8) “ಜೇಮ್ಸ್ ವಾರಿಯರ್ಸ್” ಮಾಲೀಕರು- ಸತ್ಯ, ನಾಯಕ ರವಿಚೇತನ್, ಸ್ಟಾರ್ ರಾಯಭಾರಿ ಅನಿರುದ್ಧ ಜಟ್ಕರ್ .
9)”ದೊಡ್ಮನೆ ಡ್ರಾಗನ್ಸ್” ಮಾಲೀಕರು- ಸುರೇಶ್ ಮತ್ತು ನಿರಂತರ ಗಣೇಶ್, ನಾಯಕ ಪ್ರವೀಣ್ ತೇಜ್, ಸ್ಟಾರ್ ರಾಯಭಾರಿ ವಸಿಷ್ಠ ಸಿಂಹ.
10) “ಅರಸು ಹಂಟರ್ಸ್”, ಮಾಲೀಕರು- ಆನಂದ್, ನಾಯಕ ಭುವನ್ ಗೌಡ, ಸ್ಟಾರ್ ರಾಯಭಾರಿ ಇಮ್ರಾನ್ ಸರ್ದಾರಿಯಾ .